ಪ್ರಮುಖ ಸುದ್ದಿಮೈಸೂರು

ಮಾಜಿ ಸಚಿವರಾದ ಕಳಕಪ್ಪ ಎಸ್.ಬಂಡಿ ಚಾಮುಂಡಿಬೆಟ್ಟಕ್ಕೆ ಭೇಟಿ

ಮೈಸೂರು,ಆ.2:- ಸಣ್ಣ ಕೈಗಾರಿಕೆ ನಿಗಮದ ಅಧ್ಯಕ್ಷರು,ರೋಣ ಕ್ಷೇತ್ರದ ಶಾಸಕ, ಮಾಜಿ ಸಚಿವರಾದ ಕಳಕಪ್ಪ ಎಸ್.ಬಂಡಿ ಇಂದು  ಮೈಸೂರಿಗೆ ಭೇಟಿ ನೀಡಿ ಚಾಮುಂಡಿಬೆಟ್ಟಕ್ಕೆ ತೆರಳಿ ಭಕ್ತರ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ಈ ಸಂದರ್ಭ ನಾಗರಾಜ್ ಸಂತೇ ಬಾಚನಹಳ್ಳಿ, ಶಂಕರಪ್ಪ ನಂದೀಕೇಶ್ವರ ಪ್ರೆಸ್ ಸಿಂಧಘಟ್ಟ, ನಂದೀಶ್ ಇಂಜಿನಿಯರ್, ಸಜ್ಜನ್ ಅಡ್ವೋಕೇಟ್, ಸಿದ್ದಪ್ಪ ಬೆಂಗಳೂರು, ಅಶೋಕ ಹೊನ್ನಾಳಿ, ಎಂ.ಪಿ. ಪಾಟೀಲ್, ಎಸ್.ವಿ. ಪಾಟೀಲ್ ನಾಗಣ್ಣ ಉಪಸ್ಥಿತರಿದ್ದರು.

ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಕಳಕಪ್ಪ ಎಸ್.ಬಂಡಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದರಲ್ಲದೇ ವಿಶೇಷ ಪೂಜೆ ಸಲ್ಲಿಸಿದರು. ಅದೇ ಮಾರ್ಗದಲ್ಲಿ ಸಿಗುವ ನಂದಿಯ ವಿಗ್ರಹವಿರುವಲ್ಲಿಗೂ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಬೆಂಗಳೂರಿಗೆ ತೆರಳಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: