ಮೈಸೂರು

ಈ ಬಾರಿಯೂ ಸ್ವಚ್ಛ ನಗರ ಪ್ರಶಸ್ತಿ, ಹ್ಯಾಟ್ರಿಕ್ ಸಾಧಿಸಿದ ಮೈಸೂರು ಮಹಾನಗರಪಾಲಿಕೆ?

ಮೈಸೂರು ಮಹಾನಗರ ಪಾಲಿಕೆ ಮೈಸೂರನ್ನು ಸ್ವಚ್ಛನಗರವೆಂಬುದನ್ನು ಇನ್ನೊಮ್ಮೆ ಸಾಬೀತುಪಡಿಸಿದೆ.  ಈಗಾಗಲೇ ಎರಡು ಬಾರಿ ಸ್ವಚ್ಛ ನಗರವೆಂಬ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಪಾಲಿಕೆ ಇದೀಗ ಹ್ಯಾಟ್ರಿಕ್ ಗೆಲುವಿನೊಂದಿಗೆ ವಿಜಯದ ನಗು ಬೀರಿದೆ.

ಮೈಸೂರು ಮಹಾನಗರಪಾಲಿಕೆಗೆ ಈ ಬಾರಿಯೂ ಸ್ವಚ್ಛ ನಗರಿ ಎಂಬ ಪ್ರಶಸ್ತಿ ಲಭಿಸಿದ್ದು, ಪ್ರಶಸ್ತಿಯನ್ನು ಸ್ವೀಕರಿಸಲು ಮೇ.4ರಂದು ಮಹಾನಗರ ಪಾಲಿಕೆಯ ಆಯುಕ್ತ ಜಿ.ಜಗದೀಶ್ ಹಾಗೂ ಮೇಯರ್ ಎಂ.ಜೆ.ರವಿಕುಮಾರ್ ಅವರಿಗೆ ಆಹ್ವಾನ ನೀಡಲಾಗಿದೆ. ಅದಕ್ಕಾಗಿ ಪ್ರಶಸ್ತಿ ಸ್ವೀಕರಿಸಲು ದೆಹಲಿಗೆ ತೆರಳಲಿದ್ದಾರೆ. ಈ ಕುರಿತು ಸಿಟಿಟುಡೆ ಗೇ ಆಯುಕ್ತರೇ ಮಾಹಿತಿ ನೀಡಿದ್ದಾರೆ.

ಆದರೆ ಯಾವ ಸ್ಥಾನವನ್ನು ಕಾಯ್ದುಕೊಂಡಿದೆ ಎಂಬುದು ರಹಸ್ಯವಾಗಿದ್ದರೂ ಮೊದಲನೇ ಸ್ಥಾನವನ್ನು ಕಾಯ್ದುಕೊಂಡಿದೆ ಎಂಬುದು ನಂಬಲರ್ಹ ಮೂಲಗಳಿಂದ  ಲಭಿಸಿದೆ. ಒಟ್ಟಿನಲ್ಲಿ ಮೈಸೂರ ಮತ್ತೊಮ್ಮೆ ಜಗತ್ತಿನಾದ್ಯಂತ ಸ್ವಚ್ಛನಗರವೆಂದು ಗುರುತಿಸಿಕೊಂಡಿರುವುದು ಹೆಮ್ಮೆಯ ವಿಷಯವೇ ಆಗಿದೆ.

Leave a Reply

comments

Related Articles

error: