ಪ್ರಮುಖ ಸುದ್ದಿಮನರಂಜನೆ

ಆ.13ಕ್ಕೆ ಅಲ್ಲು ಅರ್ಜುನ್ ಅಭಿನಯದ `ಪುಷ್ಪ’ ಸಿನಿಮಾದ ಮೊದಲ ಹಾಡು ರಿಲೀಸ್

ಬೆಂಗಳೂರು,ಆ.2- ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರ ಬಹುನಿರೀಕ್ಷೆಯ ಸಿನಿಮಾ `ಪುಷ್ಪ’ ದ ಮೊದಲ ಹಾಡಿನ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅಲ್ಲು, ‘ನನ್ನ ಪ್ರೀತಿಯ DSP ನಿಮಗೆ ಹುಟ್ಟುಹಬ್ಬದ ಶುಭಾಶಯ. ನನ್ನಿಂದ ಕಾಯಲು ಆಗುತ್ತಿಲ್ಲ, ಪುಷ್ಪ ಚಿತ್ರಕ್ಕೆ ಅದ್ಭುತವಾಗಿ ಸಂಗೀತ ಸಂಯೋಜಿಸಿರುವ ನೀವು ಇದೇ ರೀತಿ ಮನರಂಜನೆ ನೀಡುತ್ತಿರಿ’ ಎಂದು ಬರೆದಿದ್ದಾರೆ. ಅಲ್ಲದೇ ಆಗಸ್ಟ್ 13 ರಂದು ಪುಷ್ಪ ಸಿನಿಮಾದ ಮೊದಲ ಸಾಂಗ್ ಬಿಡುಗಡೆಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಈ ಸಾಂಗ್ ಬಿಡುಗಡೆಯಾಗಲಿದ್ದು, ದೇಶದ ಹೆಸರಾಂತ ಸಂಗೀತಗಾರರು ಆಲ್ಬಂನಲ್ಲಿ ಭಾಗಿಯಾಗಿದ್ದಾರೆ.

ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಸುಕುಮಾರ್ ಕಾಂಬಿನೇಷನ್​​ನಲ್ಲಿ ಮೂಡಿ ಬರುತ್ತಿರುವ ಪುಷ್ಪ ಮೂರನೇ ಚಿತ್ರ. ಈ ಮೊದಲು ಆರ್ಯ ಮತ್ತು ಆರ್ಯ 2 ಚಿತ್ರ ಬ್ಲಾಕ್ ಬಾಸ್ಟರ್ ಸಕ್ಸಸ್ ಕಂಡಿದ್ದವು.(ಏಜೆನ್ಸೀಸ್, ಎಂ.ಎನ್)

 

Leave a Reply

comments

Related Articles

error: