ಸುದ್ದಿ ಸಂಕ್ಷಿಪ್ತ

ಕಾರ್ಮಿಕ ದಿನಾಚರಣೆ ಹಾಗೂ ಆರೋಗ್ಯ ತಪಾಸಣಾ ಶಿಬಿರ ಮೇ.1ರಂದು

ಕಾರ್ಮಿಕ ದಿನಾಚರಣೆಯಂಗವಾಗಿ ಮೇ.1ರ ಮಧ್ಯಾಹ್ನ 1ಕ್ಕೆ ಅಖಿಲ ಭಾರತೀಯ ಭಾವಸಾರ್ ಕ್ಷತ್ರಿಯ ಮಹಾಸಭಾ ಯುವ ಪರಿಷತ್ ನಿಂದ ಉಚಿತ ಆರೋಗ್ಯ ತಪಾಸಣಾ ಮತ್ತು ಹಿರಿಯ ಟೈಲರ್ ಗಳಿಗೆ ಸನ್ಮಾನವನ್ನು ಚಾಮುಂಡೇಶ್ವರಿ ದೇವಸ್ಥಾನದ ಹತ್ತಿರ, ಅಶೋಕರಸ್ತೆಯಲ್ಲಿ ನಡೆಯಲಿದ್ದು, ಉದ್ಘಾಟನೆ ಎ.ಬಿ.ಬಿ.ಕೆ ಮಹಾಸಭಾ ಅಧ್ಯಕ್ಷ ಸುಧೀರ್ ಎಸ್.ನವಲೆ, ಮುಖ್ಯ ಅತಿಥಿಗಳಾಗಿ : ಬಿಜೆಪಿ ರೈತ ಮೋರ್ಚಾದ ಮಲ್ಲಪ್ಪಗೌಡ, ಯುವ ಪರಿಷತ್ ರಾಷ್ಟ್ರಾಧ್ಯಕ್ಷ ಯೋಗೇಂದ್ರ ವರ್ಣಿ, ಅಧ್ಯಕ್ಷ ವೀಣಾ ಅರುಣ್ ಮಾಲತ್ಕರ್, ನಗರ ಘಟಕದ ಅಧ್ಯಕ್ಷ ಡಾ.ಮಂಜುನಾಥ್ ಬಿ.ಹೆಚ್. ಪೇಯಿಂಟ್ & ವಾರ್ನಿಷ್ ಮಾಜಿ ಅಧ್ಯಕ್ಷ ಅನಂತು, ಕವೀಶ್ ಗೌಡ, ನಗರಪಾಲಿಕೆ ಸದಸ್ಯ ರಾಜಲಕ್ಷ್ಮೀ ಎಂ.ಶಿವಣ್ಣ, ಬಿ.ವಿ.ಮಂಜುನಾಥ್, ರಮೇಶ್ ಹಾಗೂ ಇತರರು ಪಾಲ್ಗೊಳ್ಳುವರು.

ಅನ್ನಪೂರ್ಣ ಕಣ್ಣಿನ ಆಸ್ಪತ್ರೆ : ಕಾರ್ಮಿಕ ದಿನಾಚರಣೆಯಂಗವಾಗಿ ಉಚಿತ ಕಣ್ಣಿನ ತಪಾಸಣಾ ಹಾಗೂ ಜಾಗೃತಿ ಕಾರ್ಯಕ್ರಮವನ್ನು ಮೇ.1ರ ಬೆಳಿಗ್ಗೆ 9 ರಿಂದ ರಾತ್ರಿ 8ರವರೆಗೆ ಶಾರದ ದೇವಿನಗರದಲ್ಲಿರುವ ಅನ್ನಪೂರ್ಣ ಕಣ್ಣಿನ ಆಸ್ಪತ್ರೆಯಲ್ಲಿ ನಡೆಸಲಾಗುವುದು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 0821 4263333, 8884488258 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: