ಮೈಸೂರು

ಮಾಸ್ತಿಗುಡಿ ಪುನರ್ವಸತಿ ಕೇಂದ್ರದ ನಿವಾಸಿಗಳಿಗೆ ಆಯುಷ್ ಕಿಟ್ ವಿತರಣೆ

ಮೈಸೂರು, ಆ.3:- ಆಯುಷ್ ಇಲಾಖೆ ಹಾಗೂ ಅರಣ್ಯ ಇಲಾಖೆ ಹುಣಸೂರು ವನ್ಯಜೀವಿ ವಿಭಾಗದ ಸಹಯೋಗದಲ್ಲಿ ಮಂಗಳವಾರ ಎಚ್. ಡಿ. ಕೋಟೆ ತಾಲೂಕಿನ, ಭೀಮನಹಳ್ಳಿ ಗ್ರಾಮ ಪಂಚಾಯತ್‍ವ್ಯಾಪ್ತಿಯಲ್ಲಿರುವ ಮಾಸ್ತಿಗುಡಿ ಗಿರಿಜನ ಪುನರ್ವಸತಿ ಕೇಂದ್ರದಲ್ಲಿ ರೋಗ ನಿರೋಧಕ ವೃದ್ಧಿಸುವ ಔಷಧಿ ವಿತರಣೆ, ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಆಯೋಜಿಸಿ, ಆಯುಷ್ ಕಿಟ್ ವಿತರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪಿ. ಮಹಾದೇವ್ ಅವರು ಸರ್ಕಾರದ ಸೌಲಭ್ಯಗಳು ಎಲ್ಲರಿಗೂ ಸಿಗುವುದು ಕಷ್ಟ, ಆದರೆ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ನೆಹರು ಯುವ ಕೇಂದ್ರದ ಜಿಲ್ಲಾ ಯುವಜನ ಅಧಿಕಾರಿ ಎಸ್.ಸಿದ್ದರಾಮಪ್ಪ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಬಿ. ಎಸ್. ಸೀತಾಲಕ್ಷ್ಮಿ ತಹಶೀಲ್ದಾರ್ ನರಗುಂದ್, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಆರ್. ರಾಜು, ವಲಯ ಅರಣ್ಯಾಧಿಕಾರಿ ರಶ್ಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಣ್ಣತಾಯಮ್ಮ, ಉಪಾಧ್ಯಕ್ಷೆ ಜೆ. ಭವ್ಯ, ಸದಸ್ಯರಾದ ಜೆ.ಟಿ.ಅಯ್ಯಪ್ಪ, ಚಂದ್ರಶೆಟ್ಟಿ, ಆಯುಷ್ ವೈದ್ಯರಾದ ಡಾ.ಶಶಿಧರ್, ಡಾ. ಕುಮಾರ್, ಡಾ. ಮಮತಾ, ಪಿ.ಡಿ.ಒ. ಮಂಜುನಾಥ್, ಮಾಸ್ತಿಗುಡಿ ಗಿರಿಜನರ ಪುನರ್ವಸತಿ ಕೇಂದ್ರದ ಮುಖಂಡ ಜೆ.ಎಸ್.ಅಯ್ಯಪ್ಪ, ಎನ್.ಜಿ.ಒ.ಪ್ರತಿನಿಧಿಗಳಾದ ಲೋಕೇಶ್, ಪ್ರಕಾಶ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: