ಕರ್ನಾಟಕಪ್ರಮುಖ ಸುದ್ದಿಮೈಸೂರು

ಮಾಜಿ ಸಚಿವ ಎಸ್.ಟಿ ಸೋಮಶೇಖರ್ ಸಂಪುಟ ಸೇರುವುದು ಬಹುತೇಕ ಖಚಿತ

ಮೈಸೂರು,ಆ.4:- ಮೈಸೂರು ಜಿಲ್ಲೆಯ ಮಾಜಿ  ಉಸ್ತುವಾರಿ ಹಾಗೂ ಸಹಕಾರಿ  ಸಚಿವ ಎಸ್.ಟಿ ಸೋಮಶೇಖರ್  ಸಂಪುಟ ಸೇರುವುದು ಬಹುತೇಕ ಖಚಿತವಾಗಿದೆ.

ಎಸ್.ಟಿ ಸೋಮಶೇಖರ್ ಎರಡನೇ ಬಾರಿಗೆ ಸಚಿವರಾಗಿ ಕಾಣಿಸಿಕೊಳ್ಳಲಿದ್ದಾರೆ. ಸಂಪುಟ ಸೇರುವ ಬಗ್ಗೆ ಸಿಎಂ ಬೊಮ್ಮಾಯಿಯಿಂದ  ಕರೆ ಬಂದಿದೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ. ಸಚಿವರಾದ ಬಳಿಕ ಮತ್ತೆ ಮೈಸೂರು ಉಸ್ತುವಾರಿ ವಹಿಸಿಕೊಳ್ಳುವ ಸಾಧ್ಯತೆ ಇದೆ. ಮೈಸೂರು ಭಾಗದ ಯಾವೊಬ್ಬ ನಾಯಕನಿಗೂ ಸಚಿವ ಸ್ಥಾನ ದೊರೆಯದ ಹಿನ್ನೆಲೆಯಲ್ಲಿ  ಮತ್ತೆ ಜಿಲ್ಲಾ ಉಸ್ತುವಾರಿಯನ್ನು ಸೋಮಶೇಖರ್ ಅವರೇ ವಹಿಸಲಿದ್ದಾರೆಯೇ ಎಂಬ ಪ್ರಶ್ನೆಗಳೆದ್ದಿದೆ. ಇತ್ತ ಮಾಜಿ ಸಿಎಂ ಬಿಎಯಡಿಯೂರಪ್ಪನವರ  ಪುತ್ರ ವಿಜಯೇಂದ್ರ ಕೂಡ ಸಂಪುಟ ಸೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಒಂದು ವೇಳೆ ವಿಜಯೇಂದ್ರ ಸಚಿವರಾದರೆ ಮೈಸೂರು ಜಿಲ್ಲಾ ಉಸ್ತುವಾರಿ ವಹಿಸುವುದು ಬಹುತೇಕ ಖಚಿತವಾಗಿದೆ.   ಬಿ.ವೈ ವಿಜಯೇಂದ್ರ ಮೈಸೂರಿನ ಬಗ್ಗೆ ವಿಶೇಷ ಒಲವು ಹೊಂದಿದ್ದು, ಈ ಹಿಂದೆ ಮೈಸೂರಿನ ವರುಣ ಕ್ಷೇತ್ರದಿಂದ ಸ್ಪರ್ದಿಸಲು ಮುಂದಾಗಿದ್ದರು. ಎಸ್.ಟಿ. ಸೋಮಶೇಖರ್  ಹಾಗೂ ವಿಜಯೇಂದ್ರ ಸಂಪುಟ ಸೇರಿದರೆ  ಇಬ್ಬರಲ್ಲಿ ಒಬ್ಬರಿಗೆ ಜಿಲ್ಲೆಯ ಉಸ್ತುವಾರಿ ನೀಡುವ ಸಾಧ್ಯತೆ ಇದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: