ಕ್ರೀಡೆಪ್ರಮುಖ ಸುದ್ದಿ

ಟೋಕಿಯೊ ಒಲಿಂಪಿಕ್ಸ್: ಸೆಮಿಫೈನಲ್ ನಲ್ಲಿ ಭಾರತ ಮಹಿಳಾ ಹಾಕಿ ತಂಡಕ್ಕೆ ಸೋಲು; ಕಂಚಿನ ಪದಕಕ್ಕೆ ಹೋರಾಟ

ಟೋಕಿಯೊ,ಆ.4-ಟೋಕಿಯೊ ಒಲಿಂಪಿಕ್ಸ್ ನಲ್ಲಿ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಭಾರತ ಮಹಿಳಾ ಹಾಕಿ ತಂಡ ಸೋಲನುಭವಿಸಿದೆ. ಇದರಿಂದ ಫೈನಲ್ ಪ್ರವೇಶಿಸುವ ಕನಸು ಭಗ್ನಗೊಂಡಿದೆ.

ಆದರೆ ಭಾರತದ ವನಿತೆಯರ ಹಾಕಿ ತಂಡ ಕಂಚಿನ ಪದಕಕ್ಕಾಗಿ ಸೆಣಸಲಿದೆ. ಇಂದು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾದ ವಿರುದ್ಧ 1-2 ಗೋಲುಗಳ ಅಂತರದಿಂದ ಸೋಲು ಕಂಡಿದೆ.

ಗುರ್ಜಿತ್ ಕೌರ್ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿ 2ನೇ ನಿಮಿಷದಲ್ಲಿ ಭಾರತಕ್ಕೆ ಮುನ್ನಡೆಯನ್ನು ಒದಗಿಸಿಕೊಟ್ಟರು. ಎರಡನೇ ಕ್ವಾರ್ಟರ್ ನಲ್ಲಿ ತಿರುಗೇಟು ನೀಡಿದ ಅರ್ಜೆಂಟೀನದ ನಾಯಕಿ ನೋಯೆಲ್ ಬ್ಯಾರಿಯೊನೊವೊ ಸ್ಕೋರನ್ನು ಸಮಬಲಗೊಳಿಸಿದರು. ಅರ್ಜೆಂಟೀನದ ನಾಯಕಿ ಮತ್ತೊಂದು ಗೋಲನ್ನು ಗಳಿಸಿ ತಂಡವು 2-1 ರಿಂದ ಮುನ್ನಡೆ ಪಡೆಯುವಲ್ಲಿ ನೆರವಾದರು. ಪಂದ್ಯದ 18ನೇ ಹಾಗೂ 36ನೇ ನಿಮಿಷದಲ್ಲಿ ಗೋಲು ದಾಖಲಿಸುವ ಮೂಲಕ ಮರಿಯಾ ಅರ್ಜೆಂಟೀನಾ ಗೆಲುವಿನ ಸೂತ್ರಧಾರಿಯಾಗಿ ಹೊರಹೊಮ್ಮಿದ್ದರು.

ಆಗಸ್ಟ್ 6 ರಂದು ನಡೆಯಲಿರುವ ಪ್ಲೇ ಆಫ್ ಪಂದ್ಯದಲ್ಲಿ ಭಾರತವು ಕಂಚಿನ ಪದಕಕ್ಕಾಗಿ ಗ್ರೇಟ್ ಬ್ರಿಟನ್ ವಿರುದ್ಧ ಹೋರಾಟ ನಡೆಸಲಿದೆ. (ಏಜೆನ್ಸೀಸ್, ಎಂ.ಎನ್)

 

Leave a Reply

comments

Related Articles

error: