ಕರ್ನಾಟಕಪ್ರಮುಖ ಸುದ್ದಿ

ಆಕ್ಸಿಜನ್ ಘಟಕಕ್ಕೆ ಜಿಲ್ಲಾಧಿಕಾರಿ ಎಸ್.ಅಶ್ವಥಿ ಭೇಟಿ ; ಪರಿವೀಕ್ಷಣೆ

ರಾಜ್ಯ(ಮಂಡ್ಯ), ಆ 5:- ಮಂಡ್ಯ, ಮದ್ದೂರು , ಮಳವಳ್ಳಿ ತಾಲ್ಲೂಕಿನಲ್ಲಿ ಪ್ರಗತಿಯಲ್ಲಿರುವ ಆಕ್ಸಿಜನ್ ಘಟಕಕ್ಕೆ ಜಿಲ್ಲಾಧಿಕಾರಿ ಎಸ್.ಅಶ್ವತಿ ಭೇಟಿ ನೀಡಿ ಕಾಮಗಾರಿಯ ಪರಿವೀಕ್ಷಣೆ ನಡೆಸಿದರು.
ನಂತರ ಮಂಡ್ಯ ತಾಲೂಕಿನ ಹಳುವಡಿಯ ಆಲೆಮನೆಗಳಿಗೆ ಭೇಟಿ ನೀಡಿ, ಆಲೆಮನೆಯ ಶುಚಿತ್ವ, ಬೆಲ್ಲ ಉತ್ಪಾದನೆಯ ಗುಣಮಟ್ಟತೆ ಬಗ್ಗೆ ಪರಿಶೀಲಿಸಿದರು ಹಾಗೂ ರಾಸಾಯನಿಕ ಮುಕ್ತ ಬೆಲ್ಲ ಉತ್ಪಾದನೆ ಮಾಡಲು ಕ್ರಮವಹಿಸುವಂತೆ ಸೂಚಿಸಿದರು. ನಂತರ ಆಲೆಮನೆ ಕಾರ್ಯನಿರ್ವಹಿಸುವ ವೈಖರಿಯ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ನಡೆಸಿ, ಅಧಿಕಾರಿಗಳೊಂದಿಗೆ ಮಾಹಿತಿಯನ್ನು ಪಡೆದುಕೊಂಡು ಚರ್ಚಿಸಿದರು. ನಂತರ ಕಬ್ಬು ಕಟಾವು ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ರೈತರೊಂದಿಗೆ ಸಮಾಲೋಚನೆ ನಡೆಸಿ, ರೈತರ ಸಮಸ್ಯೆ, ಕುಂದುಕೊರತೆಗಳ ಬಗ್ಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಆಯಾ ತಾಲ್ಲೂಕಿನ ತಹಶೀಲ್ದಾರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: