ಕ್ರೀಡೆದೇಶಪ್ರಮುಖ ಸುದ್ದಿವಿದೇಶ

  ಚಿನ್ನದ ಪದಕದ ರೇಸ್ ನಿಂದ ಹೊರಬಂದ ವಿನೇಶ್ ಫೋಗಟ್ : ಕಂಚು ಗೆಲ್ಲುವ  ಅವಕಾಶ

ವಿದೇಶ(ಟೋಕಿಯೋ)ಆ.5:- ಟೋಕಿಯೊ ಒಲಿಂಪಿಕ್ಸ್ 2020 ರ ಕುಸ್ತಿಯಲ್ಲಿ ಭಾರತಕ್ಕೆ ನಿರಾಶೆಯಾಗಿದೆ.

ಚಿನ್ನದ ಪದಕದ ಕನಸನ್ನು ಹೊತ್ತ  ಸ್ಪರ್ಧಿ ವಿನೇಶ್ ಫೋಗಟ್ ಕ್ವಾರ್ಟರ್ ಫೈನಲ್ ನಲ್ಲಿ ಸೋಲುಂಡಿದ್ದಾರೆ. ವಿನೇಶ್ ಫೋಗಟ್ ಅವರನ್ನು ಬೆಲಾರೂಸ್ ನ ವನೆಸ್ಸಾ ಕಲಾಜಿನ್ಸ್ಕಾಯಾ 9-3ರಿಂದ ಸೋಲಿಸಿದ್ದಾರೆ.

ಕ್ವಾರ್ಟರ್ ಫೈನಲ್ ನಲ್ಲಿ  ಸೋಲನುಭವಿಸಿದ  ನಂತರ ವಿನೇಶ್ ಫೋಗಟ್ ಚಿನ್ನದ ಪದಕದ ರೇಸ್ ನಿಂದ ಹೊರ ಬಿದ್ದಿದ್ದಾರೆ. ವಿನೇಶ್ ಫೋಗಟ್ 53 ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಚಿನ್ನದ ಪದಕಕ್ಕೆ ಅತಿದೊಡ್ಡ ಸ್ಪರ್ಧಿಯಾಗಿದ್ದರು. ಆದರೆ ಬೆಲಾರೂಸ್ ನ ವನೆಸ್ಸಾ ಕಲಾಜಿನ್ಸ್ಕಾಯಾ ತನ್ನ  ಮುಂದೆ ನಿಲ್ಲಲು ವಿನೇಶ್ ಗೆ ಅವಕಾಶ ನೀಡಲಿಲ್ಲ.

ಆದಾಗ್ಯೂ ವಿನೇಶ್ ಫೋಗಟ್ ಟೋಕಿಯೊ ಒಲಿಂಪಿಕ್ಸ್‌ನಲ್ಲಿ  ತಮ್ಮ ಹೋರಾಟ ನಡೆಸಿದ್ದು, ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿನೇಶ್ ಫೋಗಟ್ ಏಕಪಕ್ಷೀಯ ಗೆಲುವು ಸಾಧಿಸಿದ್ದಾರೆ. ವಿನೇಶ್ ಫೋಗಟ್ ತನ್ನ ಎದುರಾಳಿಯನ್ನು 7-1ರಿಂದ ಸೋಲಿಸಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.

ಆದಾಗ್ಯೂ  ಕಂಚಿನ ಪದಕದ ಭರವಸೆ ಇನ್ನೂ ಜೀವಂತವಾಗಿದೆ.  ಬೆಲಾರೂಸ್‌ನ ವನೆಸ್ಸಾ ಕಲಾಜಿನ್ಸ್ಕಾಯಾ ಫೈನಲ್‌ ಗೆ ಪ್ರವೇಶಿಸಿದರೆ, ವಿನೇಶ್ ಫೋಗಟ್ ಕಂಚಿನ ಪದಕಕ್ಕಾಗಿ ಹೋರಾಡುವ ಅವಕಾಶವನ್ನು ಪಡೆಯುತ್ತಾರೆ ಎನ್ನಲಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: