ಮೈಸೂರು

ದ್ವಿ ಚಕ್ರ ವಾಹನ ಕಳ್ಳನ ಬಂಧನ : 6 ಲಕ್ಷ ರೂ ಬೆಲೆ ಬಾಳುವ 7 ದ್ವಿ ಚಕ್ರ ವಾಹನ ವಶ

ಮೈಸೂರು,ಆ.5:- ಉದಯಗಿರಿ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ದ್ವಿ ಚಕ್ರ ವಾಹನ ಕಳ್ಳನನ್ನು ಬಂಧಿಸಿದ್ದು, ಬಂಧಿತರಿಂದ  6,00,000 ರೂ ಬೆಲೆ ಬಾಳುವ 07 ದ್ವಿ ಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

4.08.2021 ರಂದು ಉದಯಗಿರಿ ಠಾಣೆಯ ಪೊಲೀಸರು ಠಾಣಾ ವ್ಯಾಪ್ತಿಯಲ್ಲಿ ಗಸ್ತಿನಲ್ಲಿದ್ದಾಗ ರಾಜ್‍ ಕುಮಾರ್ ರಸ್ತೆಯ ತ್ರೀವೇಣಿ ವೃತ್ತದ ಬಳಿ ಹೊಂಡಾ ಆ್ಯಕ್ಟೀವಾ ಮತ್ತು ಸುಜುಕಿ ಆ್ಯಕ್ಸೀಸ್ ದ್ವಿಚಕ್ರ ವಾಹನದಲ್ಲಿ ಅನುಮಾನಾಸ್ಪದವಾಗಿ ಬರುತ್ತಿದ್ದ  ಮಹಮದ್ ಶಾಬಾಜ್ ಬಿನ್ ಮಹಮದ್ ಶಫಿ(21), ನಂ.444 ಶಾಲು ಬೇಕರಿ ಬಳಿ, 2ನೇ ಕ್ರಾಸ್, ಗೌಸಿಯಾನಗರ, ಮೈಸೂರು ಹಾಗೂ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು  ವಶಕ್ಕೆ ಪಡೆದು ವಿಚಾರ ಮಾಡಲಾಗಿ ಈ ಇಬ್ಬರು ನಗರದ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ದ್ವಿಚಕ್ರವಾಹನಗಳನ್ನು ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾರೆ. ಇವರಿಂದ  ಒಟ್ಟು 6,00,000 ರೂ ಮೌಲ್ಯದ 7 ದ್ವಿಚಕ್ರ ವಾಹನಗಳನ್ನು (3 -ಹೊಂಡಾ ಡಿಯೋ, 2-ಸುಜಕಿ ಆ್ಯಕ್ಸೀಸ್, 1-ಹೊಂಡಾ ಅಕ್ಟೀವಾ, 1-ಟಿವಿಎಸ್ ಅಪ್ಪಾಚಿ) ವಶ ಪಡಿಸಿಕೊಂಡಿದ್ದು, ಕಾನೂನಿನ ರೀತ್ಯಾ ಕ್ರಮ ಕೈಗೊಂಡಿರುತ್ತಾರೆ.

ಈ ಪತ್ತೆ ಕಾರ್ಯದಿಂದ ಆಲನಹಳ್ಳಿ ಪೊಲೀಸ್ ಠಾಣೆಯ-02, ಕೃಷ್ಣರಾಜ ಪೊಲೀಸ್ ಠಾಣೆಯ02,ನಜರ್ ಬಾದ್ ಪೊಲೀಸ್ ಠಾಣೆಯ-02, ಮೈಸೂರು ದಕ್ಷಿಣ ಠಾಣೆಯ-01 ಪ್ರಕರಣಗಳು ಪತ್ತೆಯಾಗಿರುತ್ತದೆ.

ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಡಿಸಿಪಿ   ಗೀತಪ್ರಸನ್ನ, ದೇವರಾಜ ವಿಭಾಗದ ಎಸಿಪಿ  ಶಶಿಧರ್ ಅವರ ಮಾರ್ಗದರ್ಶನದಲ್ಲಿ ಉದಯಗಿರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್  ಪಿ.ಕೆ.ರಾಜು ಪಿ.ಎಸ್.ಐ ಸುನೀಲ್, ನಾಗರಾಜ ನಾಯಕ್, ಸಿಬ್ಬಂದಿಗಳಾದ ಶಂಕರ್. ಸಿದ್ದೀಕ್ ಅಹಮದ್, ಸೋಮಶೇಖರ. ಮೋಹನ್ ಕುಮಾರ್, ಸಮೀರ್ ಶಿವರಾಜಪ್ಪ  ಅವರುಗಳು ಮಾಡಿರುತ್ತಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: