ಮೈಸೂರು

ವಿದ್ಯಾಶ್ರೀಷ ತೀರ್ಥ ಶ್ರೀಪಾದಂಗಳವರ 80ನೇ ವರ್ಧಂತಿ ಮಹೋತ್ಸವ : ಗುರುವಂದನೆ

ಮೈಸೂರು,ಆ.5:-  ಶ್ರೀವ್ಯಾಸರಾಜ ಮಠದ ಮಠಾಧೀಶರಾದ  ವಿದ್ಯಾಶ್ರೀಷ ತೀರ್ಥ ಶ್ರೀಪಾದಂಗಳವರ 80ನೇ ವರ್ಧಂತಿ ಮಹೋತ್ಸವದ ಅಂಗವಾಗಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ವತಿಯಿಂದ ಕೃಷ್ಣಮೂರ್ತಿ ಪುರಂನಲ್ಲಿರುವ ವ್ಯಾಸತೀರ್ಥ ವಿದ್ಯಾಪೀಠದಲ್ಲಿ ಶ್ರೀಗಳಿಗೆ ಗುರುವಂದನೆ ಸಲ್ಲಿಸಿ ಆಶೀರ್ವಾದ ಪಡೆಯಲಾಯಿತು.

ನಂತರ  ಶ್ರೀವ್ಯಾಸರಾಜ ಮಠದ ಮಠಾಧೀಶರಾದ  ವಿದ್ಯಾಶ್ರೀಷ ತೀರ್ಥ ಶ್ರೀಪಾದಂಗಳವರು ಮಾತನಾಡಿ  ಹಿಂದೂ ಸಮಾಜದ ಆಚರಣೆ  ಸಂಪ್ರದಾಯವನ್ನು ಪಾಲಿಸಲು ಬ್ರಾಹ್ಮಣ ಯುವಕರು ಮುಂದಾಗಬೇಕು. ಬ್ರಾಹ್ಮಣ ಯುವ ವೇದಿಕೆ ಕಳೆದ ಐದಾರು ವರ್ಷಗಳಿಂದ ಸಂಘಟನಾತ್ಮಕವಾಗಿ ಧಾರ್ಮಿಕ ಕಾರ್ಯಕ್ರಮಗಳು ಹೋರಾಟಗಳು, ಸಮಾವೇಶ ಸೇರಿದಂತೆ ಸರ್ಕಾರದ ಗಮನ ಸೆಳೆದು ಹಲವಾರು ಚಟುವಟಿಕೆಗಳನ್ನು ಆಯೋಜಿಸಿ ಯುವಪೀಳಿಗೆಯನ್ನು ಬೇರು ಮಟ್ಟದಲ್ಲಿ ಬಲಿಷ್ಠಗೊಂಡಿರುವುದು ಶ್ಲಾಘನೀಯ ಎಂದರು.

ಈ ಸಂದರ್ಭ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷರಾದ ಡಾ. ಕೆ.ರಘುರಾಂ ವಾಜಪೇಯಿ, ಬ್ರಾಹ್ಮಣ ಸಂಘದ ಕಾರ್ಯದರ್ಶಿ ಅಪೂರ್ವ ಸುರೇಶ್, ಬ್ರಾಹ್ಮಣ ಯುವ ವೇದಿಕೆಯ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಬಿಜೆಪಿ ಮುಖಂಡ ಕೆ.ಎಂ ನಿಶಾಂತ್, ಕಡಕೊಳ ಜಗದೀಶ್, ರಂಗನಾಥ್, ಸುಚೀಂದ್ರ ಚಕ್ರಪಾಣಿ ಇನ್ನಿತರರು ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: