ಮೈಸೂರು

ದ್ವಿ ಚಕ್ರ ವಾಹನ ಮತ್ತು ಮೊಬೈಲ್ ಕಳ್ಳತನ ಮಾಡುತ್ತಿದ್ದ ಕಳ್ಳನ ಬಂಧನ

ಮೈಸೂರು,ಆ.5:-  ದೇವರಾಜ ಠಾಣೆಯ ಪೊಲೀಸರು ದ್ವಿಚಕ್ರ ಮತ್ತು ಮೊಬೈಲ್ ಕಳ್ಳತನ ಮಾಡುತ್ತಿದ್ದ ಕಳ್ಳನೋರ್ವನನ್ನು ಬಂಧಿಸಿದ್ದು, 5,00,000  ಮೌಲ್ಯದ 05 ದ್ವಿ ಚಕ್ರ ವಾಹನಗಳು ಮತ್ತು ರೂ 45,000  ಮೌಲ್ಯದ ಬಾಳುವ 03 ಮೊಬೈಲ್ ಫೋನ್‍ ಗಳನ್ನು ವಶಪಡಿಸಿಕೊಂಡಿದ್ದಾರೆ.

04/08/2021 ರಂದು ದೇವರಾಜ ಪೊಲೀಸರು ಠಾಣಾ ವ್ಯಾಪ್ತಿಯ ಗಸ್ತಿನಲ್ಲಿರುವಾಗ ಬಿ.ಎನ್. ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಬೈಕ್ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ  ಸಂತೋಷ್ @ ಸಂತು ಬಿನ್ ಶಿವುಶಂಕರ್,( 21) ಮನೆ ನಂ 20, 10ನೇ ಬಿ ಕ್ರಾಸ್, ಇಟ್ಟಮಡು, ಬನಶಂಕರಿ 3ನೇ ಹಂತ, ಬೆಂಗಳೂರು ಮತ್ತು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಲಾಗಿ, ಸಂತೋಷ ಮತ್ತು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಇಬ್ಬರೂ ಸೇರಿಕೊಂಡು ಮೈಸೂರು, ಬೆಂಗಳೂರಿನಲ್ಲಿ ಬೈಕ್‍ ಗಳನ್ನು ಕಳವು ಮಾಡಿ, ಕಳವು ಮಾಡಿದಂತಹ ಬೈಕ್‍ ಗಳಲ್ಲಿಯೇ ರಸ್ತೆಗಳಲ್ಲಿ ಒಂಟಿಯಾಗಿ ಮೊಬೈಲ್‍ನಲ್ಲಿ ಮಾತನಾಡಿಕೊಂಡು ಹೋಗುವವರನ್ನು ಗುರಿಯಾಗಿಸಿ ಮೊಬೈಲ್ ಸುಲಿಗೆ ಮಾಡುತ್ತಿದ್ದ ಬಗ್ಗೆ ತಿಳಿಸಿದ್ದಾರೆ. ಬಂಧಿತನಿಂದ  5,00,000ರೂ.ಮೌಲ್ಯದ 05 ದ್ವಿ ಚಕ್ರ ವಾಹನಗಳು ಮತ್ತು 45,000ರೂ. ಮೌಲ್ಯದ 03 ಮೊಬೈಲ್ ಫೋನ್‍ ಗಳನ್ನು ವಶಪಡಿಸಿಕೊಂಡಿದ್ದು, ಕಾನೂನಿನ ರೀತ್ಯಾ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಪತ್ತೆ ಕಾರ್ಯದಿಂದ ಮೈಸೂರು ನಗರದ ದೇವರಾಜ ಠಾಣೆಯ-01, ಮೇಟಗಳ್ಳಿ ಠಾಣೆಯ-01, ಬೆಂಗಳೂರು ಕೆ.ಪಿ. ಅಗ್ರಹಾರ ಠಾಣೆಯ-1, ಕೆಂಗೇರಿ ಠಾಣೆಯ-01, ಕಲಾಸಿ ಪಾಳ್ಯ ಠಾಣೆಯ-01 ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣಗಳು ಹಾಗೂ ಕೆಂಗೇರಿ ಠಾಣೆಯ -02, ಕಲಾಸಿ ಪಾಳ್ಯ ಠಾಣೆಯ 01 ಮೊಬೈಲ್ ಸುಲಿಗೆ ಪ್ರಕರಣಗಳು ಪತ್ತೆಯಾಗಿರುತ್ತವೆ.

ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಡಿ.ಸಿ.ಪಿ  ಗೀತಪ್ರಸನ್ನ, ದೇವರಾಜ ವಿಭಾಗದ ಎ.ಸಿ.ಪಿ.ರವರಾದ   ಶಶಿಧರ್ ಎಂ.ಎನ್. ಅವರ ಮಾರ್ಗದರ್ಶನದಲ್ಲಿ ದೇವರಾಜ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್   ದಿವಾಕರ್.ಆರ್, ಲಷ್ಕರ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್   ಸುರೇಶ್ ಕುಮಾರ್‍ ಅವರುಗಳ ನೇತೃತ್ವದಲ್ಲಿ ಪಿ.ಎಸ್.ಐ ಎಸ್ ರಾಜು ಮತ್ತು   ಎಂ.ಆರ್ ಲೀಲಾವತಿ, ಸಿಬ್ಬಂದಿಯವರಾದ ವೇಣುಗೋಪಾಲ, ಸುರೇಶ್, ನಂದೀಶ್, ಪ್ರದೀಪ್, ಚಂದ್ರು, ವಿರೇಶ್ ಬಾಗೇವಾಡಿ ಅವರು ಮಾಡಿರುತ್ತಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: