ದೇಶಪ್ರಮುಖ ಸುದ್ದಿ

ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಭಾರತ ಹಾಕಿ ತಂಡ: ಕೋಚ್ ರೀಡ್, ನಾಯಕ ಮನ್ ಪ್ರೀತ್ ಸಿಂಗ್ ಗೆ ಕರೆ ಮಾಡಿ ಶ್ಲಾಘಿಸಿದ ಪ್ರಧಾನಿ ಮೋದಿ

ನವದೆಹಲಿ,ಆ.5-ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಪುರುಷರ ಹಾಕಿ ತಂಡ ಕಂಚಿನ ಪದಕ ಜಯಿಸಿದೆ. ಈ ಹಿನ್ನೆಲೆಯಲ್ಲಿ ತಂಡದ ನಾಯಕ ಮನ್ ಪ್ರೀತ್ ಸಿಂಗ್ ಮತ್ತು ತಂಡದ ಕೋಚ್ ಗ್ರಹಾಂ ರೀಡ್ ಗೆ ದೂರವಾಣಿ ಕರೆ ಮಾಡಿದ ಪ್ರಧಾನಿ ಮೋದಿ ಅವರು ತಂಡದ ಶ್ರಮವನ್ನು ಶ್ಲಾಘಿಸಿದ್ದಾರೆ.

ಮೋದಿ ಅವರು ಕರೆ ಮಾಡಿ, ಮನ್ ಪ್ರೀತ್ ಸಿಂಗ್ ಜೀ ನಿಮಗೆ ಅಭಿನಂದನೆಗಳು. ‘ನೀವು ಮರಳಿ ಬಂದ ನಂತರ ನಾವು ಖಂಡಿತವಾಗಿಯೂ ಭೇಟಿಯಾಗುತ್ತೇವೆ. ಇಡೀ ದೇಶವು ನಿಮ್ಮ ಬಗ್ಗೆ ಹೆಮ್ಮೆಪಡುತ್ತದೆ ಎಂದು ಹೇಳಿದರು.

ನಂತರ ಮೋದಿ ರೀಡ್ ಜೊತೆ ಮಾತನಾಡುತ್ತಾ, ‘ಅಭಿನಂದನೆಗಳು. ನಾವು ಇತಿಹಾಸವನ್ನು ರಚಿಸಿದ್ದೇವೆ ಎಂದು ಹೇಳಿದರು. ನಿಮ್ಮ ಮಾತುಗಳು ನಮಗೆ ಬಹಳ ಸ್ಪೂರ್ತಿದಾಯಕವಾಗಿದೆ. ಧನ್ಯವಾದಗಳು ಎಂದು ರೀಡ್ ಪ್ರಧಾನಿಗೆ ಹೇಳಿದರು. ಮೋದಿ ರೀಡ್‌ಗೆ, ‘ನಿಮ್ಮ ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿತು. ನನಗೆ ಅತ್ಯಂತ ಹೆಮ್ಮೆ ಇದೆ’ ಎಂದರು.

ಭಾರತ ತಂಡ ಜರ್ಮನಿಯ ವಿರುದ್ಧ 5-4 ಗೋಲುಗಳಿಂದ ಗೆಲುವು ಸಾಧಿಸಿದೆ. ಆ ಮೂಲಕ ಭಾರತ ಪುರುಷರ ಹಾಕಿ ತಂಡ 41 ವರ್ಷಗಳ ನಂತರ ಒಲಂಪಿಕ್ಸ್ ಪದಕ ಗೆದ್ದಿದೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: