
ಮೈಸೂರು
ಪಿಹೆಚ್ ಡಿ ವಿದ್ಯಾರ್ಥಿನಿ ಮೇಲೆ ಮೈಸೂರು ವಿವಿ ಪ್ರಾಧ್ಯಾಪಕನಿಂದ ಅತ್ಯಾಚಾರ,ದೂರು
ಮೈಸೂರು, ಆ.5:- ಪಿಹೆಚ್ ಡಿ ವಿದ್ಯಾರ್ಥಿನಿಯೋರ್ವಳ ಮೇಲೆ ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ರೋರ್ವರು ಅತ್ಯಾಚಾರ ನಡೆಸಿದ ಆರೋಪ ಕೇಳಿ ಬಂದಿದ್ದು ಜಯಲಕ್ಷ್ಮೀ ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪಿಹೆಚ್ ಡಿ ವಿದ್ಯಾರ್ಥಿನಿಗೆ ಮನೆಗೆ ಪಾಠ ಹೇಳಿಕೊಡುತ್ತೇನೆ ಬಾ ಎಂದು ಕರೆಸಿಕೊಂಡ ಪ್ರಾಧ್ಯಾಪಕ ಡಾ.ರಾಮಚಂದ್ರಪ್ಪ ಎಂಬವರ ಮೇಲೆ ಅತ್ಯಾಚಾರ ನಡೆಸಿದ ಆರೋಪ ಕೇಳಿ ಬಂದಿದೆ. ಇಂದು ಮಧ್ಯಾಹ್ನ ಪ್ರಾಧ್ಯಾಪಕ ರ ಮನೆಗೆ ಹೋಗಿದ್ದಾಗ ಕೋಣೆಗೆ ಬಾ ಎಂದು ಕರೆದೊಯ್ದ ರಾಮಚಂದ್ರ ಪ್ಪನವರು ನನ್ನ ಮೇಲೆ ಅತ್ಯಾಚಾರ ವೆಸಗಿದ್ದು,ಆ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ ಎಂದು ತಿಳಿಸಿದ್ದಾರೆ. ಅವರ ಪತ್ನಿಗೂ ವಿಷಯ ತಿಳಿಸಿರುವುದಾಗಿ ವಿದ್ಯಾರ್ಥಿನಿ ತಿಳಿಸಿದ್ದು, ಇದೇ ವೇಳೆ ಪ್ರಾಧ್ಯಾಪಕರ ಪತ್ನಿಯು ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದಾಗಿ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)