ಕ್ರೀಡೆದೇಶಪ್ರಮುಖ ಸುದ್ದಿ

ಭಾರತ ಮಹಿಳಾ ಹಾಕಿ ಟೀಮ್ ಕೋಚ್ ಶೋರ್ಡ್ ಮಾರಿನ್ ರಾಜೀನಾಮೆ

ದೇಶ(ನವದೆಹಲಿ)ಆ.7:- ಟೋಕಿಯೊ ಒಲಿಂಪಿಕ್ಸ್ ನಲ್ಲಿ ಸತತ ಮೂರು ಸೋಲುಗಳನ್ನು ಅನುಭವಿಸಿದ ಭಾರತೀಯ ಮಹಿಳಾ ಹಾಕಿ ತಂಡ  ಎಲ್ಲರನ್ನೂ ಬೆರಗುಗೊಳಿಸಿ ಸೆಮಿಫೈನಲ್ ಗೆ ಪ್ರಯಾಣ ಬೆಳೆಸಿತ್ತು. ಒಲಿಂಪಿಕ್ಸ್‌ ನಲ್ಲಿ ಭಾರತೀಯ ಮಹಿಳಾ ಹಾಕಿ ತಂಡ ಈ ಮೈಲಿಗಲ್ಲನ್ನು ತಲುಪಿದ್ದು ಇದೇ ಮೊದಲು. ಅದೇ ವೇಳೆ ಮಹಿಳಾ ತಂಡವು ಸೆಮಿಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ 2-1 ಅಂತರದಿಂದ ಸೋತ ನಂತರ ಕಂಚಿನ ಪದಕದ ಪ್ಲೇಆಫ್ ಪಂದ್ಯವನ್ನು ಸಹ ಕಳೆದುಕೊಂಡಿತು. ಅದರ ನಂತರ ತಂಡದ ಕೋಚ್ ಶೋರ್ಡ್ ಮಾರಿನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಒಲಿಂಪಿಕ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಪ್ಲೇಆಫ್ ಪಂದ್ಯದವರೆಗೆ ಮಾತ್ರ ತಂಡದೊಂದಿಗಿನ ತನ್ನ ಜವಾಬ್ದಾರಿಯಾಗಿತ್ತು ಎಂದು ಭಾರತೀಯ ಮಹಿಳಾ ಹಾಕಿ ತಂಡದ ಕೋಚ್ ಶೋರ್ಡ್ ಮಾರಿನ್ ಹೇಳಿದ್ದಾರೆ. ಅದೇ ವೇಳೆ ದೇಶದಾದ್ಯಂತ ಮಹಿಳಾ ಹಾಕಿ ತಂಡದ ಪ್ರದರ್ಶನವನ್ನು ನೋಡಿ  ಎಲ್ಲಾ ತರಬೇತುದಾರರು ಶೋರ್ಡ್ ಮಾರಿನ್ ತರಬೇತಿಯನ್ನು ಪ್ರಶಂಸಿಸುತ್ತಿದ್ದಾರೆ. ಅವರ  ಕಠಿಣ ತರಬೇತಿಯ ಫಲವಾಗಿ ಭಾರತೀಯ ಮಹಿಳಾ ತಂಡವು ಆಸ್ಟ್ರೇಲಿಯಾದಂತಹ ದೊಡ್ಡ ತಂಡವನ್ನು ಸೋಲಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿತ್ತು.

ಕೋಚ್ ಶೋರ್ಡ್ ಮಾರಿನ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿ ‘ನಾವು ಪದಕ ಗೆಲ್ಲಲಿಲ್ಲ, ಆದರೆ ನಾವು ಮಹತ್ವವಾದುದನ್ನು ಗೆದ್ದಿದ್ದೇವೆ ಎಂದು ನಾನು ಭಾವಿಸುತ್ತೇನೆ. ನಾವು ಭಾರತೀಯರನ್ನು ಮತ್ತೊಮ್ಮೆ ಹೆಮ್ಮೆಪಡುವಂತೆ ಮಾಡಿದೆವು ಮತ್ತು ಲಕ್ಷಾಂತರ ಹುಡುಗಿಯರಿಗೆ ಸ್ಫೂರ್ತಿ ನೀಡಿ ನೀವು ನಿಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಬಹುದೆಂದು ತೋರಿಸಿದೆವು, ಎಲ್ಲಿಯವರೆಗೆ  ನೀವು ಕಷ್ಟಪಟ್ಟು ಕೆಲಸ ಮಾಡುತ್ತೀರೋ ಫಲ ದೊರೆಯುತ್ತದೆಂಬ ವಿಶ್ವಾಸವಿರಲಿ. ನಿಮ್ಮ ಸಹಕಾರಕ್ಕೆ ಧನ್ಯವಾದಗಳು ಎಂದಿದ್ದಾರೆ.

ಆನ್‌ ಲೈನ್ ಸುದ್ದಿಗೋಷ್ಠಿಯಲ್ಲಿ ಭಾರತೀಯ ಮಹಿಳಾ ಹಾಕಿ ತಂಡದೊಂದಿಗಿನ ತನ್ನ ಕೊನೆಯ ಪಂದ್ಯವಾಗಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: