ಮೈಸೂರು
ವಾರಾಂತ್ಯ ಕರ್ಫ್ಯೂ : ರೈಲ್ವೆ ಮ್ಯೂಸಿಯಂ ಬಂದ್
ಮೈಸೂರು,ಆ.7:- ಮೈಸೂರು ಜಿಲ್ಲೆಯಲ್ಲಿ ರಾಜ್ಯ ಸರ್ಕಾರ ವಿಧಿಸಿರುವ ವಾರಾಂತ್ಯ ಕರ್ಫ್ಯೂ ದೃಷ್ಟಿಯಿಂದ, ಮೈಸೂರು ರೈಲು ಮ್ಯೂಸಿಯಂ ಶನಿವಾರ ಮತ್ತು ಭಾನುವಾರಗಳಂದು ನಗರದಲ್ಲಿ ಕೋವಿಡ್ ತಡೆಯುವ ದೃಷ್ಟಿಯಿಂದ ವಿಧಿಸಿರುವ ನಿರ್ಬಂಧಗಳು ಜಾರಿಯಲ್ಲಿರುವವರೆಗೂ ಮುಚ್ಚಿರುತ್ತದೆ.
ಆದಾಗ್ಯೂ ರೈಲು ಮ್ಯೂಸಿಯಂ ಮಂಗಳವಾರ(ವಾರದ ರಜೆ) ಹೊರತುಪಡಿಸಿ ವಾರದ ದಿನಗಳಲ್ಲಿ ಸಂದರ್ಶಕರಿಗೆ ತೆರೆದಿರುತ್ತದೆ. ಎಂದು ನೈರುತ್ಯ ರೈಲ್ವೆ ವಿಭಾಗ ತಿಳಿಸಿದೆ. (ಜಿ.ಕೆ,ಎಸ್.ಎಚ್)