
ಕ್ರೀಡೆದೇಶಪ್ರಮುಖ ಸುದ್ದಿಮನರಂಜನೆ
ಚಿನ್ನದ ಹುಡುಗನಿಗೆ ಬಾಲಿವುಡ್ ತಾರೆಯರಿಂದ ಗಾಯಕಿ ಲತಾ ಮಂಗೇಶ್ಕರ್ ರಿಂದ ಅಭಿನಂದನೆ
ದೇಶ(ನವದೆಹಲಿ)ಆ.7:- 23 ವರ್ಷದ ನೀರಜ್ ಚೋಪ್ರಾ ಜಾವೆಲಿನ್ ಥ್ರೋದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ಟೋಕಿಯೊ ಒಲಿಂಪಿಕ್ಸ್ 2020 ರಲ್ಲಿ ಭಾರತಕ್ಕೆ ಮೊದಲ ಚಿನ್ನ ಮತ್ತು ಏಳನೇ ಪದಕವಾಗಿದೆ. ನೀರಜ್ ಚಿನ್ನದ ಪದಕ ಗೆದ್ದ ತಕ್ಷಣ, ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ನೀರಜ್ ಚಿನ್ನ ಗೆದ್ದ ಮೇಲೆ ಸೆಲೆಬ್ರಿಟಿಗಳು ಕೂಡ ತಮ್ಮ ಸಂತೋಷವನ್ನು ಸಾಮಾಜಿಕ ಮಾಧ್ಯಮದ ಮೂಲಕ ವ್ಯಕ್ತಪಡಿಸುತ್ತಿದ್ದಾರೆ.
ಬಾಲಿವುಡ್ ನಟ ಅಕ್ಷಯ್ ಕುಮಾರ್ ಟ್ವೀಟ್ ಮಾಡಿ “ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ ನೀರಜ್ ಚೋಪ್ರಾ ಅವರಿಗೆ ಅಭಿನಂದನೆಗಳು. ಕೋಟ್ಯಂತರ ಜನರ ಸಂತೋಷದ ಕಣ್ಣೀರಿಗೆ ನೀವು ಜವಾಬ್ದಾರರಾಗಿರುತ್ತೀರಿ. ವೆಲ್ ಡನ್” ಎಂದು ಬರೆದಿದ್ದಾರೆ.
ಚೇತನ್ ಭಗತ್ “ಧನ್ಯವಾದಗಳು ಮತ್ತು ಅಭಿನಂದನೆಗಳು ನೀರಜ್ ಚೋಪ್ರಾ, ನೀವು ಇಡೀ ದೇಶಕ್ಕೆ ಹೆಮ್ಮೆ ತಂದಿದ್ದೀರಿ” ಎಂದು ಟ್ವೀಟ್ ಮಾಡಿದ್ದಾರೆ.
ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಟ್ವೀಟ್ ಮಾಡಿ “ನಮಸ್ಕಾರ. ಹೊಸ ಇತಿಹಾಸ ಸೃಷ್ಟಿಸಿದ ನೀರಜ್ ಚೋಪ್ರಾ ಬಗ್ಗೆ ಇಡೀ ಭಾರತ ಹೆಮ್ಮೆಪಡುತ್ತದೆ. ನಾನು ದೇಶದ ಹೆಮ್ಮೆ ನೀರಜ್ ಅವರನ್ನು ಅಭಿನಂದಿಸುತ್ತೇನೆ” ಎಂದಿದ್ದಾರೆ.
ಬಾಲಿವುಡ್ ತಾರೆಯರಾದ ಅನಿಲ್ ಕಪೂರ್, ನಮೃತಾ ಶಿರೋಡ್ಕರ್ ಸೇರಿದಂತೆ ಹಲವರು ಅಭಿನಂದನೆ ಸಲ್ಲಿಸಿದ್ದಾರೆ. (ಏಜೆನ್ಸೀಸ್,ಎಸ್.ಎಚ್)