ದೇಶಪ್ರಮುಖ ಸುದ್ದಿ

ಕಳೆದ 24ಗಂಟೆಗಳಲ್ಲಿ ದೇಶದಲ್ಲಿ 35,499 ಹೊಸ ಕೊರೊನಾ ಸೋಂಕು ಪ್ರಕರಣ ಪತ್ತೆ

ದೇಶ(ನವದೆಹಲಿ)ಆ.9:- ಮಾರಣಾಂತಿಕ ಕೊರೊನಾ ವೈರಸ್‌ ನ ಎರಡನೇ ಅಲೆ ದೇಶದಲ್ಲಿ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 35 ಸಾವಿರದ 499 ಹೊಸ ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿವೆ.

ಅದೇ ವೇಳೆ 447 ಮಂದಿ ಸಾವನ್ನಪ್ಪಿದ್ದಾರೆ. ಈಗ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ನಾಲ್ಕು ಲಕ್ಷದ ಎರಡು ಸಾವಿರದ 188 ಆಗಿದೆ. ದೇಶದಲ್ಲಿ ಚೇತರಿಕೆಯ ಪ್ರಮಾಣವು ಈಗ 97.40 ಪ್ರತಿಶತಕ್ಕೆ ಏರಿಕೆಯಾಗಿದೆ.

ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯ ಪ್ರಕಾರ ಭಾನುವಾರ ಸಂಜೆ 7 ಗಂಟೆಯವರೆಗೆ ದೇಶದಲ್ಲಿ  50 ಕೋಟಿ 68 ಲಕ್ಷ 10 ಸಾವಿರದ 492 ಡೋಸ್ ಕೊರೋನಾ ಲಸಿಕೆಯನ್ನು ನೀಡಲಾಗಿದೆ.  ಅದರಲ್ಲಿ 55 ಲಕ್ಷ 91 ಸಾವಿರದ 657 ಡೋಸ್‌ ಗಳನ್ನು  ನಿನ್ನೆ ನೀಡಲಾಗಿದೆ.

ಭಾರತದಲ್ಲಿ  ನಿನ್ನೆ 13 ಲಕ್ಷ 71 ಸಾವಿರದ 871 ಮಾದರಿ ಪರೀಕ್ಷೆಗಳನ್ನು ಕೊರೋನಾ ವೈರಸ್‌ ಗಾಗಿ ಮಾಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿದೆ.   ನಿನ್ನೆಯವರೆಗೆ ಒಟ್ಟು 48 ಕೋಟಿ 17 ಲಕ್ಷ 67 ಸಾವಿರದ 232 ಮಾದರಿ ಪರೀಕ್ಷೆಗಳನ್ನು ಮಾಡಲಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: