ದೇಶಪ್ರಮುಖ ಸುದ್ದಿ

  ಇಂದಿನಿಂದ ಎರಡು ದಿನಗಳ ಜಮ್ಮು ಮತ್ತು ಕಾಶ್ಮೀರ ಪ್ರವಾಸ ಕೈಗೊಂಡ  ರಾಹುಲ್ ಗಾಂಧಿ

ದೇಶ(ನವದೆಹಲಿ)ಆ.9:-  ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಸಂಜೆ   ಕಾಲ ಶ್ರೀನಗರ ತಲುಪಲಿದ್ದಾರೆ. ಅವರು ಎರಡು ದಿನಗಳ  ಜಮ್ಮು ಮತ್ತು ಕಾಶ್ಮೀರ ಪ್ರವಾಸ ಕೈಗೊಂಡಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ  370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಇದು ರಾಹುಲ್ ಗಾಂಧಿಯವರ ಮೊದಲ ಶ್ರೀನಗರ ಭೇಟಿಯಾಗಿದೆ. 370 ರದ್ದುಗೊಳಿಸಿದ ಎರಡು ವಾರಗಳ ನಂತರ 2019 ರ ಆಗಸ್ಟ್‌ ನಲ್ಲಿ ರಾಹುಲ್ ಗಾಂಧಿ ಪ್ರತಿಪಕ್ಷ ನಿಯೋಗದೊಂದಿಗೆ ಶ್ರೀನಗರವನ್ನು ತಲುಪಿದ್ದರು, ಆದರೆ ಆಡಳಿತವು ಎಲ್ಲಾ   ನಾಯಕರನ್ನು ವಿಮಾನ ನಿಲ್ದಾಣದಿಂದಲೇ ವಾಪಸ್ ಕಳಿಸಿತ್ತು. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: