ಕರ್ನಾಟಕಪ್ರಮುಖ ಸುದ್ದಿಮೈಸೂರು

ಮೈಸೂರಿನಲ್ಲಿ ಹೆಚ್ಚು ಕೊರೊನಾ ಪರೀಕ್ಷೆ ನಡೆಸಲು ಸೂಚಿಸಿದ್ದೇನೆ : ಸಿಎಂ ಬಸವರಾಜ್ ಬೊಮ್ಮಾಯಿ

ಮೈಸೂರು,ಆ.9: -ದೇವರ ದಯೆಯಿಂದ ಕೋವಿಡ್ ಮೂರನೇ ಅಲೆ ಬರಬಾರದು. ಮೈಸೂರಿನಲ್ಲಿ ಪಾಸಿಟಿವಿಟಿ ದರ 1.19 ಇದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದರು.

ಕೋವಿಡ್ ಕುರಿತ ಅಧಿಕಾರಿಗಳ ಸಭೆ ಬಳಿಕ ಮೈಸೂರಿನ ಜಿಪಂ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಎಲ್ಲಾ ಸಚಿವರು, ಶಾಸಕರು, ಅಧಿಕಾರಿಗಳ ಸಭೆ ಮಾಡಿದ್ದೇನೆ. ಮೈಸೂರು ಜಿಲ್ಲೆ ಸ್ಥಿತಿಗತಿ, ಮೂರನೇ ಹಂತದ ಮುಂಜಾಗ್ರತೆ ಬಗ್ಗೆ ಪರಿಶೀಲನೆ ಮಾಡಿ ಸಭೆ ಮಾಡಿದ್ದೇನೆ.
ಮೈಸೂರಿನ ಪಾಸಿಟಿವಿಟಿ ರೇಟ್ 1.19ಇದೆ. ಕಳೆದ ಒಂದು ವಾರದಿಂದ 20 ಡೆತ್ ಆಗಿದೆ. 1 ಲಕ್ಷದ ,26 ಸಾವಿರ ವ್ಯಾಕ್ಸಿನೇಷನ್‌ ಆಗಿದೆ ಮೈಸೂರು ಜಿಲ್ಲೆಯಲ್ಲಿ‌. ಕೋವಿಡ್ ಮೂರನೇ ಅಲೆ ದೇವರ ದಯೆಯಿಂದ ಬರಬಾರದು. ಬಂದ್ರೆ ಏನೆಲ್ಲ ಕ್ರಮ ಕೈಗೊಳ್ಳಬೇಕು ಕೈಗೊಳ್ಳಲಾಗುತ್ತದೆ ಎನ್ನುವುದರ ಕುರಿತು ಚರ್ಚಿಸಿದ್ದೇವೆ ಎಂದರು.
ತಜ್ಞರ ಸಲಹೆ ಪ್ರಕಾರ ಕೇರಳ, ಮಹಾರಾಷ್ಟ್ರ ದಲ್ಲಿ ಕೋವಿಡ್ ಹೆಚ್ಚಾದ ಹಿನ್ನಲೆ ಯಲ್ಲಿ ಅಧಿಕಾರಿಗಳು ಚೆಕ್ ಪೋಸ್ಟ್ ನಲ್ಲಿ ಸಿರಿಯಸ್ ಆಗಿ ಕೆಲಸ ಮಾಡಬೇಕು. ಚೆಕ್ ಪೋಸ್ಟ್ ನಲ್ಲಿ ಕೆಲಸ ಮಾಡುವ ಎಲ್ಲರಿಗೂ ವ್ಯಾಕ್ಸಿನೇಷನ್‌ ಆಗಬೇಕು.
ಸದ್ಯ ರಾಜ್ಯಕ್ಕೆ65 ಲಕ್ಷ ಡೋಸ್ ಬರ್ತಿದೆ ಮುಂದಿನ ದಿನಗಳಿಗೆ 1ಕೋಟಿ ಲಸಿಕೆಗೆ ಮನವಿ ಮಾಡಲಾಗಿದ್ದು, ಮುಂದಿನ ತಿಂಗಳಿನಿಂದ 1.5 ಕೋಟಿ ಲಸಿಕೆ ಬಂದ್ರೆ ದಿನಕ್ಕೆ 5 ಲಕ್ಷ ವ್ಯಾಕ್ಸಿನೇಷನ್‌ ಗುರಿ ಹೊಂದಲಾಗಿದೆ. ಸದ್ಯ 9 ಸಾವಿರ ಟೆಸ್ಟ್ ಮಾಡಲಾಗುತ್ತಿದೆ. ಮೈಸೂರು ಜಿಲ್ಲೆಗೆ ಮಂಡ್ಯ, ಚಾ,ನಗರ, ಕೊಡಗು, ಕೇರಳ ದಿಂದ ಹೆಚ್ಚು ಜನ ಬರ್ತಾರೆ. ಹೀಗಾಗಿ ಮೈಸೂರಿ‌ನಲ್ಲಿ ಹೆಚ್ಚು ಟೆಸ್ಟ್ ನಡೆಸುವಂತೆ ಸೂಚಿಸಿದ್ದೇನೆಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: