ಕರ್ನಾಟಕನಮ್ಮೂರುಪ್ರಮುಖ ಸುದ್ದಿಮೈಸೂರು

ದಸರಾ ಚಲನಚಿತ್ರೋತ್ಸವಕ್ಕೆ ಚಾಲನೆ

ದಸರಾ ಉತ್ಸವದಲ್ಲಿ 6 ದಿನಗಳ ಕಾಲ ನಡೆಯಲಿರುವ ಚಲನಚಿತ್ರೋತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಕಲಾಮಂದಿರದಲ್ಲಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಕಾವೇರಿ ನೀರಿನ ವಿವಾದ ರಾಜ್ಯವನ್ನು ಪದೇ ಪದೇ ಸಂಕಷ್ಟಕ್ಕೆ ಸಿಲುಕಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಚಲನಚಿತ್ರೋತ್ಸವದ ಉದ್ಘಾಟನೆಯನ್ನು ನಡೆಸಬೇಕಿತ್ತು. ಆದರೆ ಸರ್ವಪಕ್ಷಗಳ ಸಭೆ ಇರುವುದರಿಂದ ಅವರು ಬೆಂಗಳೂರಿಗೆ ತೆರಳಿದ್ದಾರೆ. ಸುಪ್ರೀಂಕೋರ್ಟ್ ತೀರ್ಪನ್ನು ಕಡೆಗಣಿಸಲೂ ಆಗದ ನೀರನ್ನು ಬಿಡದ ಪರಿಸ್ಥಿತಿ ನಮ್ಮದಾಗಿದೆ. ನಮ್ಮಲ್ಲಿ ಕುಡಿಯುವ ನೀರು ಮಾತ್ರ ಇದೆ. ನೈಜ ಪರಿಸ್ಥಿತಿಯನ್ನು ಅರ್ಥ ಮಾಡಿಸಿ ವಿಧಾನಸಭೆಯಲ್ಲಿ ಇದನ್ನು ಚರ್ಚಿಸಲಾಗುವುದು ಎಂದರು.

ಒಡೆಯರ ಕಾಲದಿಂದಲೂ ದಸರಾ ನಡೆಯುತ್ತಿದೆ. ದಸರಾ ಉತ್ಸವವು ಕ್ರೀಡೆ, ಕಲೆ, ಸಾಹಿತ್ಯ ಸೇರಿದಂತೆ ಸಾಮಾಜಿಕ ಜವಾಬ್ದಾರಿ ನಿರ್ವಹಣೆ ಮಾಡುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ದಸರಾ ಸಂಬಂಧಪಟ್ಟ ಕಿರು ಹೊತ್ತಗೆಯನ್ನು ಬಿಡುಗಡೆಗೊಳಿಸಲಾಯಿತು. ದಸರಾ ಮತ್ತು ಚಲನಚಿತ್ರಕ್ಕೆ ಸಂಬಂಧಿಸಿದ ವಿಡಿಯೋ ತುಣುಕನ್ನು ಬಿಡುಗಡೆಗೊಳಿಸಲಾಯಿತು. ಜಿಲ್ಲಾಧಿಕಾರಿ ರಂದೀಪ್, ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್, ಪವನ್ ಕುಮಾರ್, ರಾಜೇಂದ್ರಸಿಂಗ್ ಬಾಬು, ಚಿತ್ರನಟಿಯರಾದ ಮಯೂರಿ, ರಿಷಿಕಾಸಿಂಗ್, ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: