ಮೈಸೂರು

ಬಸವಣ್ಣನವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ : ನಾರಾಯಣ ಗೌಡ

ಇಂದು ದೇಶದಾದ್ಯಂತ ಬಸವ ಜಯಂತಿಯನ್ನು  ವಿಜೃಂಭಣೆಯಿಂದ ಆಚರಿಸಲಾಯಿತು. ಬಸವ ಜಯಂತಿ ಪ್ರಯುಕ್ತ ಮೈಸೂರು ಹೋಟೆಲ್ ಮಾಲೀಕರಸಂಘ, ಕರ್ನಾಟಕ ನಾಯಕ ಜನಾಂಗದ ಹಿತರಕ್ಷಣಾ ವೇದಿಕೆ ವತಿಯಿಂದ ಮೈಸೂರಿನ ಬಸವೇಶ್ವರ ವೃತ್ತದಲ್ಲಿರುವ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಅರ್ಪಿಸಲಾಯಿತು.

ಇದೇ ಸಂದರ್ಭ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ ಮಾತನಾಡಿ ಇಂದು ನಾಡಿನಾದ್ಯಂತ ಕಾಯಕ ಯೋಗಿ ಬಸವಣ್ಣನವರ ಜಯಂತಿಯನ್ನು ಆಚರಿಸುತ್ತಿದ್ದೇವೆ, ಬಸವಣ್ಣನವರು ಕಾಯಕಯೋಗಿ.  ಇವರು ಜಾತಿ ಭೇದ ಮಾಡಬಾರದು. ನಾವೆಲ್ಲ ಒಂದೇ ಎಂಬ ಸಂದೇಶ ಸಾರಿದ ಮಹಾನ್ ವ್ಯಕ್ತಿ. ಅವರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ  ಜೀವನ ಉಜ್ವಲವಾಗಲಿದೆ ಎಂದರು.

ದ್ಯಾವಪ್ಪ ನಾಯಕ ಮಾತನಾಡಿ ಬಸವಣ್ಣನವರ ಜೀವನದ ಹಾದಿಯ ಕುರಿತು ತಿಳಿಸಿದರಲ್ಲದೇ ಬಸವಣ್ಣನವರ ಚರಿತ್ರೆಯನ್ನು ದೇಶದಾದ್ಯಂತ  ಪಸರಿಸುವಂತೆ ಮಾಡಬೇಕೆಂದು ಒತ್ತಾಯಿಸಿದರು. ಈ ಸಂದರ್ಭ ಸಂಘದ ಸದಸ್ಯರು ಉಪಸ್ಥಿತರಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: