
ಮೈಸೂರು
ಬರಗಾಲ ಹಿನ್ನೆಲೆ ಪರ್ಜನ್ಯ ಪೂಜೆ
ರಾಜ್ಯದಲ್ಲಿ ಭೀಕರ ಬರಗಾಲ ಹಿನ್ನಲೆಯಲ್ಲಿ ಶ್ರೀರಂಗಪಟ್ಟಣದ ಕಾವೇರಿ ನದಿ ದಂಡೆಯಲ್ಲಿ ಬ್ರಾಹಣ ಸಭಾದಿಂದ ಪರ್ಜನ್ಯ ಪೂಜೆ ನೆರವೇರಿಸಲಾಯಿತು.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಗಂಜಾಂನ ಘೋಸಾಯೀ ಘಾಟ್ ನ ಕಾವೇರಿ ನದಿ ತೀರದಲ್ಲಿ ಬ್ರಾಹ್ಮಣರೆಲ್ಲ ಸೇರಿ ಪರ್ಜನ್ಯ ಜಪ ಪೂಜೆ ನಡೆಸಿದರು. ವೇದ ಬ್ರಹ್ಮ ಡಾ.ಭಾನು ಪ್ರಕಾಶ ನೇತೃತ್ವದಲ್ಲಿ ನಡೆಯುತ್ತಿರುವ ಪರ್ಜನ್ಯ ಪೂಜೆಯಲ್ಲಿ ಮಂಡ್ಯ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ ಪಾಲ್ಗೊಂಡಿದ್ದು, ಉತ್ತಮ ಮಳೆ ಬೆಳೆಗಾಗಿ ಪ್ರಾರ್ಥಿಸಿದರು. ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದ್ದು, ಕುಡಿಯುವ ನೀರಿಗೂ ಪರಿತಪಿಸಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ಉತ್ತಮ ಮಳೆಯಾಗಲೆಂದು ಈ ಪರ್ಜನ್ಯ ಪೂಜೆ ನೆರವೇರಿಸಲಾಗುತ್ತಿದೆ ಎಂದು ಮುಖಂಡರು ತಿಳಿಸಿದರು.ಐವತ್ತಕ್ಕೂ ಅಧಿಕ ಬ್ರಾಹ್ಮಣರು ಜೀವನದಿ ಕಾವೇರಿ ಪೂಜೆಯನ್ನು ನೆರವೇರಿಸಿದರು. (ಕೆ.ಎಸ್-ಎಸ್.ಎಚ್)