ಕರ್ನಾಟಕಪ್ರಮುಖ ಸುದ್ದಿ

ಅವಾಚ್ಯ ಪದ ಬಳಕೆ ಕುರಿತು ಸ್ಪಷ್ಟನೆ ನೀಡಿದ ಸಚಿವ ಈಶ್ವರಪ್ಪ

ರಾಜ್ಯ(ಬೆಳಗಾವಿ)ಆ.11:- ಕಾಂಗ್ರೆಸ್ ನಾಯಕರ ವಿರುದ್ಧ ತಾವು ಅವಾಚ್ಯ ಶಬ್ದ ಬಳಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎಸ್ಈಶ್ವರಪ್ಪ ಸ್ಪಷ್ಟನೆ ನೀಡಿದ್ದಾರೆ.

ಕಾಂಗ್ರೆಸ್ ನ ಎಲ್ಲಾ ನಾಯಕರಿಗೆ ಆ ಪದ ಬಳಸಲಿಲ್ಲ. ಆ ಪದ ಬಳಸಿದ್ದು ಬಿಕೆ ಹರಿಪ್ರಸಾದ್ ಗೆ. ಬಳಿಕ ಆ ಬಗ್ಗೆ ಕ್ಷಮೆಯನ್ನೂ ಕೇಳಿದ್ದೇನೆ  ಎಂದು ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಇಂದು ಮಾತನಾಡಿದ ಸಚಿವ ಕೆ.ಎಸ್  ಈಶ್ವರಪ್ಪ,  ನನಗೂ ಹರಿಪ್ರಸಾದ್ ಗೂ ವೈಯುಕ್ತಿಕ ದ್ವೇಷವಿಲ್ಲ. ಆದರೆ ಅವರು ನನ್ನನ್ನು ಜೋಕರ್ ಎಂದರು. ನರೇಂದ್ರ ಮೋದಿ ಹೆಸರು ಸುಲಭ ಶೌಚಾಲಯಕ್ಕೆ ಇಡಿ ಅಂತ ಹೇಳಿದರು. ಹೀಗಾಗಿ ನನಗೆ ಸಿಟ್ಟು ಬಂತು. ಸಿಟ್ಟಿನ ಭರದಲ್ಲಿ ಆ ಹೇಳಿಕೆ ನೀಡಿದೆ. ಸಿಟ್ಟಿನ ಭರದಲ್ಲಿ ಆ ಮಾತು ಮಾತನಾಡಿ ತಕ್ಷಣವೇ ಆ ಪದ ವಾಪಸ್ ಪಡೆದೆ ಎಂದು ಹೇಳಿದ್ದಾರೆ.

ಇದೇ ವೇಳೆ ಸಿದ್ಧರಾಮಯ್ಯ ವಿರುದ್ದ ಕಿಡಿಕಾರಿದ ಸಚಿವ ಕೆ.ಎಸ್ ಈಶ್ವರಪ್ಪ, ಸಿದ್ಧರಾಮಯ್ಯಗೆ ಕೆಟ್ಟ ಕನಸು ಬೀಳುತ್ತಿದೆ. ಅವರು ಒಳ್ಳೆಯ ಆಡಳಿತ ಕೊಟ್ಟಿದ್ದರೆ ಅಧಿಕಾರಕ್ಕೆ ಬರುತ್ತಿದ್ದರು. ಈಗ ಅಧಿಕಾರ ಇಲ್ಲದೇ ವಿಲ ವಿಲ ಅಂತಾ ಒದ್ದಾಡುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.

ಸಚಿವ ಸ್ಥಾನಕ್ಕೆ ಆನಂದ್ ರಾಜೀನಾಮೆ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು  ಸಂಪುಟ ರಚನೆ ವೇಳೆ ಕೆಲವರಿಗೆ ಅಸಮಾಧಾನ ಸಹಜ. ಆನಂದ್ ಸಿಂಗ್ ಜತೆ ಸಿಎಂ, ಹಿರಿಯರು ಚರ್ಚಿಸುತ್ತಾರೆ. ಆನಂದ್ ಸಿಂಗ್ ರನ್ನು ಸಮಾಧಾನ ಮಾಡುವ ವಿಶ್ವಾಸವಿದೆ ಎಂದು ಹೇಳಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: