ಕರ್ನಾಟಕಪ್ರಮುಖ ಸುದ್ದಿ

ಸಚಿವ ಆನಂದ್ ರಾಜೀನಾಮೆ ವಿಚಾರ ಕೇವಲ ಊಹಾಪೋಹ: ಸಿಎಂ ಬೊಮ್ಮಾಯಿ

ಬೆಂಗಳೂರು,ಆ.11-ಸಚಿವ ಆನಂದ್ ಸಿಂಗ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬುದು ಕೇವಲ ಊಹಾಪೋಹ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನಂದ್ ಸಿಂಗ್ ಮತ್ತು ನಾನು ಮೂರು ದಶಕಗಳ ಗೆಳೆಯರು. ಅವರ ಜೊತೆ ನಾನು ನಿರಂತರ ಸಂಪರ್ಕದಲ್ಲಿದ್ದೇನೆ. ಮಂಗಳವಾರ ಕೂಡ ಅವರ ಜೊತೆ ಮಾತನಾಡಿದ್ದೇನೆ. ಇವತ್ತು ಕೂಡ ಅವರ ಜೊತೆ ಮಾತನಾಡ್ತೇನೆ. ಅವರ ಅನುಕೂಲ ‌ನೋಡಿಕೊಂಡು ಬರುತ್ತಾರೆ. ಅವರ ಜೊತೆ ಚರ್ಚೆಗೆ ಸಿದ್ಧ, ಆನಂದ್‌ ಸಿಂಗ್‌ ಯಾವಾಗ ಬಂದರೂ ಮಾತನಾಡುತ್ತೇನೆ. ಅವರ ವಿಚಾರ ಏನು ಎಂಬುದು ನನಗೆ ಗೊತ್ತಿದೆ. ನಾನು ಕೂಡ ಅವರಿಗೆ ಕೆಲ ವಿಚಾರದ ಬಗ್ಗೆ ಹೇಳಿದ್ದೇನೆ. ಅವರು ಬಂದು ಮಾತಾಡಿದ ಮೇಲೆ ಎಲ್ಲವೂ ಬಗೆಹರಿಯಲಿದೆ ಎಂದರು.

ರಾಜೀನಾಮೆ ಕುರಿತ ಯಾವುದೇ ಚರ್ಚೆ ನಡೆದಿಲ್ಲ, ಬರೀ ಮಾತುಕತೆ ನಡೆದಿದೆ ಅಷ್ಟೇ. ಅವರು ಯಾವುದೇ ದಾರಿ ಹಿಡಿಯಲ್ಲ. ಅಂತಿಮವಾಗಿ ಎಲ್ಲವೂ ಸರಿಯಾಗಲಿದೆ. ಇಲ್ಲಿ ನನ್ನ ಮೌನ ಪ್ರಶ್ನೆಯೇ ಅಲ್ಲ. ಆದರೆ, ಅಂತಿಮವಾಗಿ ನಾನು ಏನು ತೀರ್ಮಾನ ಮಾಡ್ತೀನಿ ಎಂಬುದರ ಮೇಲೆ ನಿಮಗೆ ಗೊತ್ತಾಗುತ್ತದೆ ಎಂದು ಹೇಳಿದರು. ಖಾತೆ ಬದಲಾವಣೆ ಮಾಡ್ತೀರಾ ಎಂಬ ಪ್ರಶ್ನೆಗೆ ಅದನ್ನೆಲ್ಲಾ ನಿಮ್ಮ ಮುಂದೆ ಹೇಳುವುದಕ್ಕೆ ಆಗಲ್ಲ ಎಂದು ತೆರಳಿದರು.

ಇನ್ನು ನಾನು ಕೇಳಿದ ಖಾತೆ ನೀಡಿಲ್ಲ ಎಂದು ಅಸಮಾಧಾನಗೊಂಡಿರುವ ಸಚಿವ ಆನಂದ್‌ ಸಿಂಗ್‌, ಬುಧವಾರ ಮಧ್ಯಾಹ್ನ 1:30ಕ್ಕೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಲಿದ್ದಾರೆ. ಶಾಸಕ ರಾಜೂಗೌಡ ಜೊತೆ ಆಗಮಿಸಿ ಬಿಎಸ್‌ವೈ ಭೇಟಿ ಮಾಡಲಿರುವ ಆನಂದ್‌ ಸಿಂಗ್‌ ನಡೆ ಭಾರೀ ಕುತೂಹಲ ಮೂಡಿಸಿದೆ. (ಎಂ.ಎನ್)

Leave a Reply

comments

Related Articles

error: