ಮೈಸೂರು

ಮಡಿವಾಳ ಸಮುದಾಯಕ್ಕೆ ಆರ್ಥಿಕವಾಗಿ ಬೆನ್ನೆಲುಬಾಗಿ ನಿಂತು ಮೇಲೆತ್ತುವ ಕಾರ್ಯ ನಡೆಯಬೇಕಿದೆ : ಅಯೂಬ್ ಖಾನ್

ಮಡಿವಾಳ ಮಾಚಿ ದೇವರ ಜಯಂತಿಯನ್ನು ಮೈಸೂರಿನ  ಇಟ್ಟಿಗೆಗೂಡಿನಲ್ಲಿರುವ ಮಡಿವಾಳರ ಸಂಘದಲ್ಲಿ ಶನಿವಾರ ಆಯೋಜಿಸಲಾಗಿತ್ತು.

ಈ ವೇಳೆ ಮಾಜಿ ಮೇಯರ್ ಹಾಗೂ ಪಾಲಿಕೆ ಸದಸ್ಯ ಅಯೂಬ್ ಖಾನ್ ಮಾತನಾಡಿ, ಮಡಿವಾಳರ ಸಂಘ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದೆ. ಹಾಗಾಗಿ ಆರ್ಥಿಕವಾಗಿ ಪ್ರೋತ್ಸಾಹಿಸಿ ಬೆಳೆಸುವ ಅಗತ್ಯತೆ ಇದೆ. ಹಿಂದೆ ಮಡಿವಾಳ ಸಮುದಾಯ ಕುಲಕಸುಬನ್ನೆ ನಂಬಿ ಜೀವನ ನಡೆಸುತ್ತಿತ್ತು. ಆದರೆ ಇಂದು ಆಧುನಿಕ ಜೀವನದ ಭರಾಟೆಯಲ್ಲಿ ಕುಲಕಸುಬುಗಳು ನಶಿಸಿ ಹೋಗಿ ಜೀವನೋಪಾಯಕ್ಕೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಉದ್ಯೋಗವಿಲ್ಲದೆ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ಸಮುದಾಯಕ್ಕೆ ಆರ್ಥಿಕವಾಗಿ ಬೆನ್ನೆಲುಬಾಗಿ ನಿಂತು ಸಾಮಾಜಿಕವಾಗಿ ಮೇಲೆತ್ತುವ ಕಾರ್ಯ ಆಗಬೇಕಿದೆ. ಸರ್ಕಾರ ಮಡಿವಾಳರ ಸಮುದಾಯಕ್ಕೆ ವಿಶೇಷ ಯೋಜನೆ ಹಾಗೂ ಅನುದಾನವನ್ನು ರೂಪಿಸುವ ಮೂಲಕ ಅಭಿವೃದ್ಧಿಗೆ ಕಾರಣವಾಗಿದೆ ಎಂದು ಹೇಳಿದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಮುದಾಯದ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮಡಿವಾಳರ ಸಂಘದ ಅಧ್ಯಕ್ಷ ಭೈರಪ್ಪ, ಕಾರ್ಯದರ್ಶಿ ಜೋಗಪ್ಪ, ಸಹ ಕಾರ್ಯದರ್ಶಿ ಎಂ.ಪುಟ್ಟಮಹದೇವು, ಖಜಾಂಚಿ ರಾಮಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: