ಪ್ರಮುಖ ಸುದ್ದಿಮೈಸೂರು

ಮುಜರಾಯಿ ಇಲಾಖೆ ನಿವೃತ್ತ ಅಧಿಕಾರಿ ಜಿಗಣಿ ಸಿದ್ದಪ್ಪ ನಿಧನ

ಮೈಸೂರು/ಬೆಂಗಳೂರು,ಆ.13:-  ಮುಜರಾಯಿ ಇಲಾಖೆಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನಿವೃತ್ತರಾಗಿದ್ದ ಜಿಗಣಿ ಸಿದ್ದಪ್ಪ ಅವರು ಇಂದು(ಶುಕ್ರವಾರ) ಬೆಳಗ್ಗೆ ಬೆಂಗಳೂರಿನ ಅಪೊಲೊ ಆಸ್ಪತ್ರೆಯಲ್ಲಿ ನಿಧನರಾಗಿರುತ್ತಾರೆ.

ಜಿಗಣಿ ಸಿದ್ದಪ್ಪ ಅವರು ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಸ್ಥಾನ, ನಂಜನಗೂಡಿನ ಶ್ರೀ ನಂಜುಂಡೇಶ್ವರ ದೇವಸ್ಥಾನ, ಸೇರಿದಂತೆ ಹಲವಾರು ದೇವಸ್ಥಾನಗಳಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದರು.

ಬಂಧಿಖಾನೆ ಇಲಾಖೆಯ ಅಧೀಕ್ಷಕರಾದ ಮಹೇಶ್ ಜಿಗಣಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ಸೋಮಶೇಖರ್ ಜಿಗಣಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮೃತರ ಸ್ವಗ್ರಾಮ ಬೆಂಗಳೂರು ಸಮೀಪದ ಜಿಗಣಿ ಬಳಿ ಶುಕ್ರವಾರ ಸಂಜೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: