ಮೈಸೂರು

ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ಅಣ್ಣ ಬಸವಣ್ಣ: ಎಸ್.ಎ.ರಾಮದಾಸ್ ಬಣ್ಣನೆ

ಅಂಧಕಾರ, ಮೌಢ್ಯಗಳೇ ತುಂಬಿದ್ದ 12ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ಶ್ರೇಷ್ಠ ದಾರ್ಶನಿಕ ಅಣ್ಣ ಬಸವಣ್ಣ ಎಂದು ಮಾಜಿ ಸಚಿವ ಎಸ್.ಎ.ರಾಮದಾಸ್ ಅಭಿಪ್ರಾಯಪಟ್ಟರು.
ಶನಿವಾರ ಮೈಸೂರು ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಬಸವಣ್ಣನ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,  ಬಸವಣ್ಣ ತನ್ನ ವಚನಗಳ ಮೂಲಕ ವಿಶ್ವಕ್ಕೆ ಬೆಳಕು ನೀಡಿದ್ದಾರೆ. ಅಸ್ಪೃಶ್ಯತೆ, ಹಿಂಸೆ, ಶೋಷಣೆಗಳಿಂದ ರಕ್ಷಿಸಿ ಎಲ್ಲರೂ ಸಮಾನರು ಎಂಬ ಸಮ ಮಂತ್ರವನ್ನು ಪಠಿಸಿ, ಅದರ ಯಶಸ್ಸಿಗೆ ಶ್ರಮಿಸಿದರು. ಜಾತಿ ಭೇದ ಮಾಡದೆ ಎಲ್ಲರೂ ಒಂದೇ ಎಂಬ ಮನೋಭಾವ ಬಿತ್ತಿದರು. ಇಂದು ಅವರ ಜಯಂತಿ ಆಚರಿಸುತ್ತಿರುವುದು ಸಂತಸ ತಂದಿದೆ. ಅವರ ಜಯಂತಿಯಂದೇ ಯಾರನ್ನೂ ಕೀಳಾಗಿ ಕಾಣದೆ ಎಲ್ಲರೂ ಸಮಾನರೆಂದು ತಿಳಿದು ಸಹೋದರತ್ವದಿಂದ ವರ್ತಿಸುತ್ತೇವೆ ಎಂದು ಶಪಥ ಮಾಡೋಣ ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ನಗರಾಧ್ಯಕ್ಷ ಡಾ.ಬಿ.ಎಚ್.ಮಂಜುನಾಥ್, ಬಸವ ಬಳಗಗಳ ಅಧ್ಯಕ್ಷ ಗೊ.ರು.ಪರಮೇಶ್ವರಪ್ಪ, ವಿಧಾನ ಪರಿಷತ್ ಸದಸ್ಯ ಸಿ.ಎಚ್.ವಿಜಯಶಂಕರ್, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಶಿವಣ್ಣ, ಉಪ ಮೇಯರ್ ರತ್ನ ಲಕ್ಷ್ಮಣ್, ಮುಖಂಡರಾದ ಫಣೀಶ್, ಸತೀಶ್, ಮೈ.ಪು.ರಾಜೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: