ದೇಶಪ್ರಮುಖ ಸುದ್ದಿ

5 ತಿಂಗಳ ನಂತರ ಅತಿ ಕಡಿಮೆ ಕೊರೊನಾ ಪ್ರಕರಣ  ಪತ್ತೆ :  24 ಗಂಟೆಗಳಲ್ಲಿ 25 ಸಾವಿರ ಜನರಿಗೆ ಸೋಂಕು  

ದೇಶ(ನವದೆಹಲಿ)ಆ.17:- ಭಾರತದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳಲ್ಲಿ ಹಠಾತ್  ಇಳಿಕೆ ಕಂಡುಬಂದಿದೆ.

ಐದು ತಿಂಗಳ ನಂತರ ಕಡಿಮೆ ಸಂಖ್ಯೆಯ ಕೊರೋನಾ ಪ್ರಕರಣಗಳು ವರದಿಯಾಗಿವೆ. ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಇತ್ತೀಚಿನ ಡೇಟಾವನ್ನು ಮಂಗಳವಾರ ಬೆಳಿಗ್ಗೆ ಬಿಡುಗಡೆ ಮಾಡಲಾಗಿದೆ. ಸಚಿವಾಲಯದ ಪ್ರಕಾರ, ಕಳೆದ 24 ಗಂಟೆಗಳಲ್ಲಿ 25,166 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ.  437 ಸೋಂಕಿತರು ಪ್ರಾಣ ಕಳೆದುಕೊಂಡಿದ್ದಾರೆ. ಈ ಮೊದಲು ಮಾರ್ಚ್ 15 ರಂದು 24,492 ಪ್ರಕರಣಗಳು ವರದಿಯಾಗಿತ್ತು. ಅದೇ ವೇಳೆ ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ 36,830 ಮಂದಿ ಗುಣಮುಖರಾಗಿದ್ದಾರೆ.  ಅಂದರೆ  ನಿನ್ನೆ 12,101 ಸಕ್ರಿಯ ಪ್ರಕರಣಗಳನ್ನು ಕಡಿಮೆ ಆಗಿದೆ.

ಕೊರೋನಾ ಸಾಂಕ್ರಾಮಿಕದ ಆರಂಭದಿಂದಲೂ ಒಟ್ಟು ಮೂರು ಕೋಟಿ 22 ಲಕ್ಷ 50 ಸಾವಿರ ಜನರು ಸೋಂಕಿಗೆ ಒಳಗಾಗಿದ್ದಾರೆ. ಈ ಪೈಕಿ 4 ಲಕ್ಷ 32 ಸಾವಿರದ 79 ಮಂದಿ ಸಾವನ್ನಪ್ಪಿದ್ದಾರೆ.   ಇಲ್ಲಿಯವರೆಗೆ 3 ಕೋಟಿ 14 ಲಕ್ಷ 48 ಸಾವಿರ ಜನರು ಗುಣಮುಖರಾಗಿದ್ದಾರೆ. ದೇಶದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ ನಾಲ್ಕು ಲಕ್ಷಕ್ಕಿಂತ ಕಡಿಮೆ ಇದೆ. ಒಟ್ಟು 3 ಲಕ್ಷದ 69 ಸಾವಿರ ಜನರು ಇನ್ನೂ ಕೊರೊನಾ ಸೋಂಕಿಗೆ ಒಳಗಾಗಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ದೇಶದಲ್ಲಿ  ಕೊರೋನಾ ಸ್ಥಿತಿ ಹೀಗಿದೆ

ಕೊರೋನಾದ ಒಟ್ಟು ಪ್ರಕರಣಗಳು – ಮೂರು ಕೋಟಿ 22 ಲಕ್ಷ 50 ಸಾವಿರದ 679, ಒಟ್ಟು ಗುಣಮುಖರಾದವರು – ಮೂರು ಕೋಟಿ 14 ಲಕ್ಷದ 48 ಸಾವಿರದ 754, ಒಟ್ಟು ಸಕ್ರಿಯ ಪ್ರಕರಣಗಳು – ಮೂರು ಲಕ್ಷ 69 ಸಾವಿರದ 846, ಒಟ್ಟು ಸಾವು- ನಾಲ್ಕು ಲಕ್ಷ 32 ಸಾವಿರದ 79, ಒಟ್ಟು   55 ಕೋಟಿ 47 ಲಕ್ಷ 30 ಸಾವಿರ ಡೋಸ್ ಲಸಿಕೆ ನೀಡಲಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: