ಮೈಸೂರು

ಮೈಸೂರು-ಕಾರವಾರ ರೈಲಿಗೆ ಬೇಡಿಕೆ : ಸಚಿವೆ ಶೋಭಾ ಕರಂದ್ಲಾಜೆಗೆ ಮನವಿ

ಮೈಸೂರು, ಆ.17:-  ಮೈಸೂರು ರೈಲು ಹೋರಾಟ ಸಮಿತಿಯಿಂದ ಇಂದು ಕೇಂದ್ರ ಸಚಿವೆ  ಶೋಭಾ ಕರಂದ್ಲಾಜೆಯವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಲಾಯಿತು.
ಬಹಳಷ್ಟು ಜನ ಉತ್ತರ ಕನ್ನಡ ಹಾಗೂ ಕರಾವಳಿ ಮೂಲದ ಜನ ಹಾಗೂ ಉದ್ಯಮಿಗಳು ಮೈಸೂರಿನಲ್ಲಿ ನೆಲೆಸಿದ್ದಾರೆ. ಅಲ್ಲದೇ ಪ್ರವಾಸೋದ್ಯಮದ ದೃಷ್ಟಿಯಿಂದಲೂ, ಮೈಸೂರು ಜಿಲ್ಲೆಯ ಪ್ರಯಾಣಿಕರಿಗೆ ಮೈಸೂರು-ಕಾರವಾರ-ಗೋವಾ ರೈಲು ಬಹಳ ಉಪಯುಕ್ತವಾಗಿದೆ. ಸುಬ್ರಹ್ಮಣ್ಯ, ಧರ್ಮಸ್ಥಳ, ಮಂಗಳೂರು, ಉಡುಪಿ, ಕೊಲ್ಲೂರು, ಗೋಕರ್ಣ ಸೇರಿದಂತೆ ಅನೇಕ ಧಾರ್ಮಿಕ ಕೇಂದ್ರಗಳಿಗೆ ಈ ಮೂಲಕ ಸಂಪರ್ಕವಿದೆ. ಈಗಿರುವ ರೈಲಿನಲ್ಲಿ ಎಲ್ಲಾ ಆಸನಗಳು ಬೆಂಗಳೂರಿನಲ್ಲಿಯೇ ಭರ್ತಿಯಾಗಿರುತ್ತದೆ. ಅದು ಸಹ ವಾರದಲ್ಲಿ 3 ದಿನ ಮಾತ್ರವೇ ಇದೆ. ಹಾಗಾಗಿ ಅನೇಕ ವರ್ಷಗಳಿಂದ ಮೈಸೂರಿನಿಂದ ಕಾರವಾರ/ಗೋವಾಗೆ ನೇರ ರೈಲು ಬೇಕೆಂಬ ಬೇಡಿಕೆ ಇದೆ. ಈಗ ಹೋರಾಟ ಸಮಿತಿಯು ಅಸ್ತಿತ್ವಕ್ಕೆ ಬಂದಿದ್ದು, ಮೊದಲ ಭಾಗವಾಗಿ ಮೈಸೂರು-ಕಾರವಾರ ನಡುವಿನ ಎಲ್ಲಾ ಜನಪ್ರತಿನಿಧಿಗಳನ್ನು ಭೇಟಿಯಾಗಿ ಸದರಿ ಬೇಡಿಕೆಯ ಸಾಧಕಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗುತ್ತಿದೆ
ಎಂದು ಸಮಿತಿ ತಿಳಿಸಿದೆ.
ಸಚಿವರನ್ನು ಭೇಟಿಯಾದ ಸಮಿತಿಯ ತಂಡದಲ್ಲಿ ಮಹೇಶ್ ಕಾಮತ್, ಜಗದೀಶ್ ಹೆಬ್ಬಾರ್, ರಾಕೇಶ್ ಭಟ್, ರವಿಶಾಸ್ತ್ರಿ, ಎಂ.ಆರ್.ಪುರಾಣಿಕ್ ಇದ್ದರು.

Leave a Reply

comments

Related Articles

error: