ಮೈಸೂರು

ಜನನ ಪ್ರಮಾಣ ಪತ್ರ ಆಸ್ಪತ್ರೆಯಲ್ಲಿಯೇ ನೀಡುವ ಪ್ರಕ್ರಿಯೆಗೆ ನಿರ್ದೇಶಕ ವಿನ್ಸೆಂಟ್ ಪಾಲಣ್ಣ ಚಾಲನೆ

 ಮೈಸೂರು, ಆ.17:-  ಮೈಸೂರು ಮಹಾನಗರಪಾಲಿಕೆ ವತಿಯಿಂದ ಜನನ ಪ್ರಮಾಣ ಪತ್ರವನ್ನ ಆಸ್ಪತ್ರೆಯಲ್ಲಿಯೇ ನೀಡುವ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ನರಸಿಂಹರಾಜ ಕ್ಷೇತ್ರದ ಮಂಡಿ ಮೊಹಲ್ಲಾದಲ್ಲಿರುವ ಸಿ.ಎಸ್.ಐ ಹೋಲ್ಡ್ಸ್ ವರ್ತ್ ಮೆಮೋರಿಯಲ್ ಮಿಷನ್ ಆಸ್ಪತ್ರೆಯಲ್ಲಿ ಜನಿಸಿದ ಶಿಶುವಿನ ತಾಯಿಗೆ ಜನನ ಪ್ರಮಾಣ ವಿತರಿಸುವ ಮೂಲಕ ನಿರ್ದೇಶಕರಾದ ವಿನ್ಸೆಂಟ್ ಪಾಲಣ್ಣ  ಚಾಲನೆ ನೀಡಿದರು,
ಇದೇ ಸಂದರ್ಭದಲ್ಲಿ ವಿನ್ಸೆಂಟ್ ಪಾಲಣ್ಣ  ಮಾತನಾಡಿ ಮೈಸೂರಿನಲ್ಲಿ 1906ರಲ್ಲಿ ಪ್ರಾರಂಭಗೊಂಡ ಮಿಷನ್ ಆಸ್ಪತ್ರೆ ಶತಮಾನದ ಹಿಂದೆಯೇ ವೈದ್ಯಕೀಯ ಕ್ಷೇತ್ರದಲ್ಲಿ ನುರಿತ ವೈದ್ಯ ಸಿಬ್ಬಂದಿಗಳನ್ನ ಕರೆತಂದು ಹೆರಿಗೆ ಶಸ್ತ್ರ ಚಿಕಿತ್ಸೆ ಪ್ರಕ್ರಿಯೆ ಸುಲಲಿತವಾಗಿ ನಡೆಯಬೇಕೆಂದು ಮಿಷನ್ ಆಸ್ಪತ್ರೆ ಗಾಯತ್ರಿ ಆಸ್ಪತ್ರೆ ಸ್ಥಾಪಿಸಲಾಯಿತು, ಮಿಷನ್ ಆಸ್ಪತ್ರೆಗೆ ಬರುವವರು ಬಹತೇಕ ಕಡುಬಡವರು.  ಇಂದು ನಗರಪಾಲಿಕೆ ಚಾಲ್ತಿಯಲ್ಲಿ ತಂದಿರುವ ಹೆರಿಗೆಯ ನಂತರ ಆಸ್ಪತ್ರೆಯಲ್ಲಿಯೇ ಪೋಷಕರಿಗೆ ಶಿಶುವಿನ ಜನನಪ್ರಮಾಣ ಪತ್ರ ಕೈಸೇರಲಿರುವುದು ಒಳ್ಳೆಯ ಬೆಳವಣಿಗೆ ಎಂದು ಶ್ಲಾಘಿಸಿದರು.
 ನಗರಪಾಲಿಕೆಯ ಜನನ ಮರಣ ವಿಭಾಗದ ಸಾಂಖ್ಯಿಕ ಅಧಿಕಾರಿ ಅನಿಲ್ ಕ್ರಿಸ್ಟಿ  ಮಾತನಾಡಿ ಮಗು ಜನನವಾದ ಬಳಿಕ ದಾಖಲಾತಿಗಳಿಗಾಗಿ ಪೋಷಕರು ಕಛೇರಿಯಿಂದ ಕಛೇರಿಗೆ ಅಲೆಯುವುದನ್ನು ತಪ್ಪಿಸಬೇಕೆನ್ನುವ ಸಲುವಾಗಿ  ಡಿಜಿಟಲ್ ತಾಂತ್ರಿಕತೆಯನ್ನ  ಬಳಸಿಕೊಂಡು ಮಗು ಜನನವಾದ ಆಸ್ಪತ್ರೆಯಲ್ಲಿಯೆ  ಆಡಳಿತ ಮಂಡಳಿಯ ಮುಖಾಂತರ ಜನನಪ್ರಮಾಣ ಪತ್ರವನ್ನ ಸ್ಥಳದಲ್ಲಿ ವಿತರಿಸುವ ಯೋಜನೆಯನ್ನ ಕಾರ್ಯರೂಪಕ್ಕೆ ತಂದಿದ್ದು ಪೋಷಕರ ಪರದಾಟ   ತಪ್ಪಿದಂತಾಗುತ್ತದೆ. ಆಸ್ಪತ್ರೆಯಿಂದ  ಬಿಡುಗಡೆಯಾಗುವ ಸಂದರ್ಭದಲ್ಲಿ ಉಚಿತವಾಗಿ ಜನನಪ್ರಮಾಣಪತ್ರ ಪಡೆಯಬಹುದು ಎಂದರು.
ಈ ಸಂದರ್ಭ ಗುರುಪ್ರಸಾದ್, ಅಧೀಕ್ಷಕಿ ಡಾ. ಸುಗುಣಶಾಂತಿ, ರೆ. ಎಲಿಷ್ ಕುಮಾರ್, ರಘುನಾಥ್, ಪ್ರಭುಸ್ವಾಮಿ, ಹರೀಶ್ ಇನ್ನಿತರರು ಇದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: