ಕರ್ನಾಟಕಪ್ರಮುಖ ಸುದ್ದಿ

ಬಂಡವಾಳ ಹಾಕದೆ 50 ಕೋಟಿ ರೂ. ಲಾಭ ಮಾಡಿಕೊಂಡ್ರಾ ರಾಹುಲ್, ರಾಬರ್ಟ್ ?

ನವದೆಹಲಿ : ಹರಿಯಾಣದಲ್ಲಿ ಭೂಮಿ ವ್ಯವಹಾರ ನಡೆಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಅವರ ಭಾವ ರಾಬರ್ಟ್ ವಾಧ್ರಾ ಅವರು ಯಾವುದೇ ಬಂಡವಾಳವಿಲ್ಲದೇ 50 ಕೊಟಿ ರೂಪಾಯಿ ಲಾಭಾ ಮಾಡಿಕೊಂಡಿದ್ದಾರಾ? ಹೀಗೊಂದು ಪ್ರಶ್ನೆ ಈಗ ಹರಿದಾಡುತ್ತಿದೆ.

2008ರಲ್ಲಿ ನಡೆದಿದ್ದ ಈ ಭೂಹಗರಣದ ಬಗ್ಗೆ ತನಿಖೆ ನಡೆಸಲು ರಚಿಸಲಾಗಿದ್ದ ನ್ಯಾ.ಎಸ್.ಎನ್. ಧಿಂಗ್ರಾ ಆಯೋಗದ ವರದಿಯಲ್ಲಿ ಈ ಅಂಶಗಳ ಉಲ್ಲೇಖವಾಗಿದೆ ಎಂಬುದು ಸುದ್ದಿಯಾಗಿ ಸಾಕಷ್ಟು ರಾಜಕೀಯ ರಾಡಿಗೆ ಕಾರಣವಾಗಿತ್ತು. ಕಳೆದ ವರ್ಷ ಆಗಸ್ಟ್ 31ರಂದೇ ಸರ್ಕಾರಕ್ಕೆ ಸಲ್ಲಿಸಲಾಗಿದ್ದ ಈ ವರದಿಯನ್ನು ಸರ್ಕಾರ ಬಹಿರಂಗಗೊಳಿಸಿರಲಿಲ್ಲ. ಇದೀಗ ಮುಚ್ಚಿದ ಲಕೋಟೆಯಲ್ಲಿ ಈ ವರದಿಯನ್ನು ಸರ್ಕಾರ ಸುಪ್ರೀಂ ಕೋರ್ಟ್‍ಗೆ ಸಲ್ಲಿಸಾಗಿದೆ ಎಂದು ವರದಿಯಾಗಿದೆ.

ವಾದ್ರಾ ಕಂಪನಿಗೆ ಲಾಭ ಮಾಡಿಕೊಡುವ ಉದ್ದೇಶದಿಂದಲೇ ಅಕ್ರಮ ಕೂಟ ಏರ್ಪಟ್ಟಿದೆ ಎಂದು ವರದಿಯಲ್ಲಿ ಆಯೋಗ ಹೇಳಿದ್ದು, ವಾದ್ರಾ ಒಡೆತನದ ಸಂಸ್ಥೆಗಳು ಖರೀದಿಸಿದ ಆಸ್ತಿ ಕುರಿತು ವಿಚಾರಣೆ ನಡೆಸಬೇಕು ಆಯೋಗ ಶಿಫಾರಸು ಮಾಡಿದೆ ಎನ್ನಲಾಗಿದೆ.

ಪ್ರಿಯಾಂಕಾಗೂ ಸುತ್ತಿಕೊಂಡ ಹಗರಣ :

ಹರಿಯಾಣದಲ್ಲಿ ಸೋನಿಯಾ ಪುತ್ರಿ ಪ್ರಿಯಾಂಕಾ ವಾಧ್ರಾ ನಡೆಸಿರುವ ಭೂಮಿ ಖರೀದಿ ವ್ಯವಹಾರದ ಬಗ್ಗೆ ಕೂಡ ಆಯೋಗ ತನಿಖೆ ಮಾಡಲಾಗಿದೆ ಎನ್ನಲಾಗಿದ್ದು, ಪ್ರಿಯಾಂಕಾಗೂ ಈ ಹಗರಣ ಸುತ್ತಿಕೊಂಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕಾ, ಫರೀದಾಬಾದ್‍ನಲ್ಲಿ ಖರೀದಿಸಿರುವ ಭೂಮಿಗೂ ಮತ್ತು ತಮ್ಮ ಪತಿ ರಾಬರ್ಟ್‌ ವಾಧ್ರಾ ಅವರಿಗೂ ಯಾವುದೇ ಸಂಬಂಧವಿಲ್ಲ. ನನ್ನ ಅಜ್ಜಿ ಇಂದಿರಾ ಗಾಂಧಿ ಅವರು ನೀಡಿದ್ದ ಆಸ್ತಿಯಿಂದ ಲಭಿಸಿದ ಬಾಡಿಗೆ ಹಣ ಬಳಸಿ ಭೂಮಿ ಖರೀದಿ ಮಾಡಿದ್ದೇನೆ ಎಂದು ಸೋನಿಯಾ ಗಾಂಧಿ ಪುತ್ರಿ ಸ್ಪಷ್ಟಪಡಿಸಿದ್ದಾರೆ.

ಡಿಎಲ್‌ಎಫ್‌ ಒಪ್ಪಂದದಿಂದ ಲಭಿಸಿದ ಹಣದ ಒಂದು ಪಾಲಿನಲ್ಲಿ ವಾದ್ರಾ ಅವರು ಹರಿಯಾಣದ ಫರೀದಾಬಾದ್‌ನಲ್ಲಿ ಭೂಮಿ ಖರೀದಿಸಿದ್ದೀರಾ ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಪ್ರಿಯಾಂಕಾ ಪ್ರತಿಕ್ರಿಯಿಸಿದ್ದಾರೆ.

2006 ರ ಏಪ್ರಿಲ್‍ನಲ್ಲಿ 15 ಲಕ್ಷ ರೂ. ನೀಡಿ ಫರೀದಾಬಾದ್‌ನ ಅಮಿಪುರದಲ್ಲಿ 5 ಎಕರೆ ಜಮೀನು ಖರೀದಿಸಿದ್ದೆ. ಇದು ಡಿಎಲ್‌ಎಫ್‌ ನಡೆಸಿದ್ದ ಭೂವ್ಯವಹಾರಕ್ಕೆ ಆರು ವರ್ಷ ಮುನ್ನ ನಡೆದ ವ್ಯವಹಾರ. 2010 ರ ಫೆಬ್ರವರಿಯಲ್ಲಿ ಜಮೀನಿನ ಮೂಲ ಮಾಲೀಕರಿಗೆ ಅದೇ ಭೂಮಿಯನ್ನು ಅಂದಿನ ಮಾರುಕಟ್ಟೆಮೌಲ್ಯವಾದ 80 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಿದ್ದೇನೆ. ಈ ಹಣವನ್ನು ಚೆಕ್‌ ಮೂಲಕ ಪಡೆದಿದ್ದೇನೆ ಎಂದು ಪ್ರಿಯಾಂಕ ಸ್ಪಷ್ಟನೆ ನೀಡಿದ್ದಾರೆ.

(ಎನ್.ಬಿ.ಎನ್)

Leave a Reply

comments

Related Articles

error: