ಪ್ರಮುಖ ಸುದ್ದಿಮೈಸೂರು

ಪೋಷಕರು ಭಾರತದಲ್ಲೇ ಇರಿ ಇಲ್ಲಿಗೆ ಬರಬೇಡಿರೆಂದು ಹೇಳುತ್ತಿದ್ದಾರೆ; ಅಳಲು ತೋಡಿಕೊಂಡ ಅಪ್ಘಾನ್ ವಿದ್ಯಾರ್ಥಿಗಳು

ಮೈಸೂರು,ಆ.18:-  ಪೋಷಕರು ನೀವು  ಭಾರತದಲ್ಲೇ ಇರಿ, ಇಲ್ಲಿಗೆ ಬರಬೇಡಿ ಅಂತ ಹೇಳುತ್ತಿದ್ದಾರೆ  ಆದರೂ ಮುಂದೆ ಏನಾಗಲಿದೆಯೋ ಎಂಬ ಭಯವಿದೆ  ಹೀಗೆಂದವರು ತಾಲಿಬಾನ್ ಉಗ್ರರ ತೆಕ್ಕೆಯಲ್ಲಿ ಸಿಲುಕಿರುವ ಅಪಘಾನಿಸ್ತಾನ ಮೂಲದ ಪ್ರಸ್ತುತ ಮೈಸೂರು ವಿಶ್ವವಿದ್ಯಾಲಯದಲ್ಲಿ ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳು.

ಮಾಧ್ಯಮಗಳ ಜೊತೆ  ತಮ್ಮ  ಅಳಲು ತೋಡಿಕೊಂಡಿರುವ ವಿದ್ಯಾರ್ಥಿಗಳು   ಭಾರತವೇ ಸುರಕ್ಷಿತ ಎಂದು ನಮ್ಮ ಪೋಷಕರು ಹೇಳುತ್ತಿದ್ದು ನಮ್ಮ ವೀಸಾವನ್ನು ವಿಸ್ತರಿಸುವಂತೆ ಮನವಿ ಮಾಡಿದರು.  ಇದೇವೇಳೆ ತನ್ನ ದೇಶದಲ್ಲಿರುವ ಕುಟುಂಬಸ್ಥರ, ಮಹಿಳೆಯರು ಪರಿಸ್ಥಿತಿ ಮುಂದೇನೋ ಎಂಬ ಬಗ್ಗೆ ಕಳವಳ ವ್ಯಕ್ತಪಡಿಸಿದರು. 20 ವರ್ಷಗಳಲ್ಲಿ ನನ್ನ ದೇಶದಲ್ಲಿ ಮಹಿಳೆಯರು ಕಚೇರಿಗೆ ಹೋಗಿದ್ದಾರೆ. ಕೆಲಸ ಮಾಡಿದ್ದಾರೆ. ಆದರೆ ಇಂದು ಮನೆಯ ಮೂಲೆಯಲ್ಲಿ ಕುಳಿತು ತಾಲಿಬಾನಿಗಳು ಏನು ನಿರ್ಧಾರ ಕೈಗೊಳ್ಳುತ್ತಾರೋ ಅಂತ ಕಾಯುವ ಸ್ಥಿತಿ ಇದೆ. ಸ್ಥಳೀಯರು ಭಯದಿಂದ ಬದುಕುತ್ತಿದ್ದಾರೆ ಎಂದರು.

ನಾವು ಪೋಷಕರೊಂದಿಗೆ ಮಾತನಾಡಿದ್ದು ಸದ್ಯ ಎಲ್ಲರೂ ಸುರಕ್ಷಿತವಾಗಿದ್ದಾರೆ. ನೀವು ಭಾರತದಲ್ಲೇ ಇರಿ, ಇಲ್ಲಿಗೆ ಬರಬೇಡಿ ಅಂತ ಹೇಳುತ್ತಿದ್ದಾರೆ. ತಾಲಿಬಾನಿಗಳಿಗೆ ಅಧಿಕಾರ ನಡೆಸಿ ಗೊತ್ತಿಲ್ಲ. ಹಿಂದೆ ಅತ್ಯಂತ ಕ್ರೂರವಾಗಿ ವರ್ತಿಸಿದ್ದಾರೆ. ಜನರಿಗೆ ಜೀವ ಭಯ ಶುರುವಾಗಿದೆ. ರಾಜಧಾನಿ ವಶಕ್ಕೆ ಪಡೆದ ನಂತರ ಇದುವರೆಗೂ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿಲ್ಲ. ಆದರೆ ಮುಂದೆ ಏನಾಗುತ್ತೋ ಅನ್ನುವ ಚಿಂತೆ ಶುರುವಾಗಿದೆ ಎಂದರು.

ಅವರು ಇಸ್ಲಾಮಿಕ್ಆಡಳಿತ ಹೇರಿದ್ದಾರೆ. ವಿದೇಶಿಯರು ಯಾರೂ ಇರಬಾರದು ಎಂದಿದ್ದಾರೆ. ಸದ್ಯ ಭಾರತ ನಮ್ಮಗಳ ವೀಸಾ ವಿಸ್ತರಿಸಬೇಕು. ಪ್ರಪಂಚ ನಮ್ಮತ್ತ ತಿರುಗಿ ನೋಡಬೇಕು. ಅಲ್ಲಿರುವ ವಿದ್ಯಾರ್ಥಿಗಳನ್ನು ವಾಪಸ್ಕರೆಸಿ ವಿದ್ಯಾಭ್ಯಾಸ ನೀಡಬೇಕು ಎಂದು ವಿದ್ಯಾರ್ಥಿಗಳು ಮನವಿ ಮಾಡಿದರು.

ಇದೇ ವೇಳೆ ವಿದ್ಯಾರ್ಥಿಗಳನ್ನು ಕರೆಯಿಸಿ ಸಭೆ ನಡೆಸಿದ ವಿವಿಯ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅವರು ಭಯಪಡಬೇಡಿ. ನಿಮ್ಮ ಜೊತೆ ನಾವಿದ್ದೇವೆ. ಈಗ ಓದಿನ ಕಡೆ ಮಾತ್ರ ನಿಮ್ಮ ಗಮನವಿರಲಿ ಎಂದು ಅಭಯ ನೀಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: