ಮೈಸೂರು

ವಿವಿಧ ಜಾತಿಯ ಗಿಡ ನೆಡುವ ಮೂಲಕ ಹಾಗೂ ಶಾಲಾ ಮಕ್ಕಳಿಗೆ ಶಿಕ್ಷಣ ಸಾಮಗ್ರಿ ವಿತರಿಸುವ ಮೂಲಕ ಡಾ.ಸುಧಾಮೂರ್ತಿ ಜನ್ಮದಿನ ಆಚರಿಸಿದ ಕೆಎಂಪಿಕೆ ಟ್ರಸ್ಟ್

ಮೈಸೂರು,ಆ.19:- ಕರುನಾಡಿನ ಕೋಟ್ಯಾಂತರ ಕನ್ನಡಿಗರಿಗೆ ಅಕ್ಷರ, ಅನ್ನ, ಆರೋಗ್ಯ, ಉದ್ಯೋಗವನ್ನು  ಕಲ್ಪಿಸಿ ಕನ್ನಡದ ಹಿರಿಮೆಯನ್ನು  ವಿಶ್ವಮಟ್ಟದಲ್ಲಿ ಶ್ರೀಮಂತಗೊಳಿಸಿರುವ   ಇನ್ಪೋಸಿಸ್ ಸ್ಥಾಪಕಾಧ್ಯಕ್ಷೆ  ಸುಧಾ ನಾರಾಯಣಮೂರ್ತಿ ಅವರ ಜನ್ಮದಿನವನ್ನು  ಕೆಎಂಪಿಕೆ ಟ್ರಸ್ಟ್ ವತಿಯಿಂದ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಸ್ವಾತಂತ್ರ್ಯಹೋರಾಟಗಾರರ ಉದ್ಯಾನವನದಲ್ಲಿ ಶಿಕ್ಷಣ ಮತ್ತು ಪರಿಸರದ ಸಂದೇಶದೊಂದಿಗೆ  ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಹಾಗೂ ಶಾಲಾ ಮಕ್ಕಳಿಗೆ ಶಿಕ್ಷಣದ ಸಾಮಗ್ರಿಗಳನ್ನು ವಿತರಿಸುವ ಮೂಲಕ ಆಚರಿಸಲಾಯಿತು.

ಹಿರಿಯ ಪತ್ರಕರ್ತರಾದ ರವೀಂದ್ರ ಜೋಶಿ  ಮಾತನಾಡಿ  ಎಷ್ಟೇ ಶ್ರೀಮಂತಿಕೆಯಿದ್ದರೂ ಸರಳವಾಗಿ ಜೀವನವನ್ನು ಹೇಗೆ ನಡೆಸಬೇಕೆಂದು ತೋರಿಸಿಕೊಟ್ಟಂತಹ ಮಹಾತಾಯಿ ಡಾ. ಸುಧಾ  ಮೂರ್ತಿ.  ಕೊರೋನಾ ಮಹಾಮಾರಿ ಕಾಲಿಟ್ಟ ಸಂದರ್ಭದಲ್ಲಿ  ಸಾವಿರಾರು ಜನರಿಗೆ ಆಶ್ರಯ ನೀಡಿದವರು.  ಕೊಡಗಿನಲ್ಲಿ ಮಹಾ ಮಳೆಯಿಂದ ತತ್ತರಿಸಿದ ಕೊಡಗಿನ ಜನರಿಗೆ ಆಸರೆಯಾಗಿ  ನಿಂತರು.  ಪ್ರತಿ ಮನುಷ್ಯನೂ ಇವರನ್ನು ನೋಡಿ ಕಲಿಯಬೇಕಾದ್ದು ತುಂಬಾ ಇದೆ . ಇವರು ಇಡೀ ದೇಶಕ್ಕೆ ಒಂದು ಮಾದರಿ ಎಂದರು.

ಹಿರಿಯ ಸಮಾಜ ಸೇವಕರಾದ ಡಾ. ಕೆ ರಘುರಾಂ ವಾಜಪೇಯಿ  ಮಾತನಾಡಿ  ಉದ್ಯಮದಲ್ಲೂ ಮತ್ತು ಸಾರ್ವಜನಿಕ ಸೇವಾ ಜೀವನದಲ್ಲೂ ಸಹ ತಮ್ಮದೇ ಆದಂತಹ ಛಾಪನ್ನು ಮೂಡಿಸಿ   ನಿರಂತರವಾಗಿ ಸೇವೆ ಮಾಡುತ್ತಿದ್ದಾರೆ. ಅವುಗಳಲ್ಲಿ ಪ್ರಮುಖವಾಗಿ ಸ್ವಚ್ಛಭಾರತ,ವಿಕಲಚೇತನ ಮಕ್ಕಳ ಕಲ್ಯಾಣ, ಅನಾಥಾಶ್ರಮಗಳಿಗೆ ದೇಣಿಗೆ, ಮಹಿಳಾ ಅಬಲೆಯರಿಗೆ ವೃತ್ತಿಪರ ಕೌಶಲ್ಯ ತರಬೇತಿ, ಯೋಧರ ನಿಧಿಗೆ ಸಹಾಯ, ಕೆರೆಗಳ ಅಭಿವೃದ್ಧಿ, ಸರ್ಕಾರಿ ಪರಿಹಾರ ನಿಧಿಗೆ ದೇಣಿಗೆ, ನೆರೆ ಸಂತ್ರಸ್ತರಿಗೆ ಅಪಾರವಾದ ಸಹಾಯ ಹಸ್ತ ಹೀಗೆ ಅವರು ಮಾಡುತ್ತಿರುವ ಹತ್ತು ಹಲವಾರು  ಕಾರ್ಯಗಳು ಪ್ರಾತಃ ಸ್ಮರಣೀಯ. ಆದ್ದರಿಂದ ಅವರಿಗೆ ತಾಯಿ ಚಾಮುಂಡೇಶ್ವರಿ ಆಯುಷ್ಯ, ಆರೋಗ್ಯ, ಅಂತಸ್ತು ಇನ್ನಷ್ಟು ಕರುಣಿಸಲಿ ಎಂದರು.

ಈ  ಸಂದರ್ಭ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ನವೀನ್ ಕುಮಾರ್ , ಜೀವಧಾರ ಗಿರೀಶ್,  ಬನ್ನೂರು ಮಹೇಂದ್ರಸಿಂಗ್ ಕಾಳಪ್ಪ ,ಪೃಥ್ವಿ ಸಿಂಗ್ ,ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ,ಅಜಯ್ ಶಾಸ್ತ್ರಿ ,ರಾಕೇಶ್ ಭಟ್ , ಕಡಕೋಳ ಜಗದೀಶ್, ವಿನಯ್ ಕಣಗಾಲ್ ,ಪರಮೇಶ್ ಗೌಡ ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ನಿಗಮ ಮಂಡಳಿಯ ರಾಜ್ಯ ನಿರ್ದೇಶಕರು ರೇಣುಕರಾಜ ,ಬಿಜೆಪಿ ಯುವ ಮೋರ್ಚಾ ನಗರ ಉಪಾಧ್ಯಕ್ಷ ಕಾರ್ತಿಕ್ ಮರಿಯಪ್ಪ ,ಲೋಹಿತ್ ,ಮಹೇಂದ್ರ ಶೈವ , ಸುಚೀಂದ್ರ, ಚಕ್ರಪಾಣಿ ,ಹರೀಶ್ ನಾಯ್ಡು   ಇನ್ನಿತರರು ಹಾಜರಿದ್ದರು.

Leave a Reply

comments

Related Articles

error: