ಮೈಸೂರು

ನಾನೂ ಕೂಡ ಮೇಯರ್ ಹುದ್ದೆ ಆಕಾಂಕ್ಷಿ : ಪಾಲಿಕೆ ಸದಸ್ಯೆ ಪ್ರಮೀಳಾ ಭರತ್ ಹೇಳಿಕೆ

ಮೈಸೂರು,ಆ.19:- ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಸೆ.3ರಂದು ನಡೆಯಲಿದ್ದು, ಬಿಜೆಪಿಯಿಂದ ಇಬ್ಬರು ಮೇಯರ್ ಆಕಾಂಕ್ಷಿಗಳ ಹೆಸರು ಕೇಳಿ ಬಂದಿದೆ.

ಬಿಜೆಪಿ ಹಿರಿಯ -ಕಿರಿಯ ಸದಸ್ಯರಿಬ್ಬರು ಆಕಾಂಕ್ಷಿಗಳಾಗಿದ್ದು, ಸುನಂದಾ ಪಾಲನೇತ್ರ ಹಾಗೂ ವಾರ್ಡ್ ನಂ 23ರ  ಪ್ರಮೀಳಾ ಭರತ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಈ ಹಿಂದೆ ಮೇಯರ್ ಹುದ್ದೆಗೆ ಬಿಜೆಪಿಯಿಂದ   ಸುನಂದಾ ಪಾಲನೇತ್ರ ಕಣಕ್ಕಿಳಿದಿದ್ದರು. ಸುನಂದಾ ಪಾಲನೇತ್ರ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ  ಸಂಬಂಧಿಯಾಗಿದ್ದಾರೆ. ಇತ್ತ ಮೇಯರ್ ಹುದ್ದೆಗೆ ನಾನು ಕೂಡ ಒಬ್ಬ ಆಕಾಂಕ್ಷಿ ಎಂದು  ಸದಸ್ಯೆ ಪ್ರಮೀಳಾ ಭರತ್ ಕೂಡ ಹೇಳುತ್ತಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಇಂದು ಪ್ರತಿಕ್ರಿಯಿಸಿದ ಅವರು ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮದೇ ಸರ್ಕಾರ ಇರುವುದರಿಂದ ಸ್ಥಳೀಯವಾಗಿ ಅಧಿಕಾರ ಹಿಡಿಯಬೇಕು ಎನ್ನುವುದು ನಮ್ಮ ಉದ್ದೇಶ. ಈ ಹಿನ್ನೆಲೆಯಲ್ಲಿ ನಾನು ಕೂಡ  ಓರ್ವ ಆಕಾಂಕ್ಷಿಯಾಗಿದ್ದೇನೆ. ಹಿರಿಯ ಸದಸ್ಯೆ ಸುನಂದಾ ಪಾಲನೇತ್ರ ಅವರನ್ನು ಆಯ್ಕೆ ಮಾಡಿದರೂ ಸರಿಯೇ ಆದರೆ ಮೇಯರ್ ಹುದ್ದೆ ಮಾತ್ರ ನಮ್ಮ ಪಕ್ಷಕ್ಕೆ ಸಿಗಬೇಕು. ನಮ್ಮೊಂದಿಗೆ ಜೆಡಿಎಸ್ ಹಾಗೂ ಕಾಂಗ್ರೆಸ್ ಸದಸ್ಯರುಗಳು ಉತ್ತಮ ಬಾಂಧವ್ಯದಿಂದಿದ್ದೇವೆ. ಆದರೆ ಈ ಬಾರಿ ಬಿಜೆಪಿಗೆ ಪೂರಕ ವಾತಾವರಣವಿದೆ. ಆಯ್ಕೆ ಬಗ್ಗೆ ಪಕ್ಷದ ವರಿಷ್ಠರು ಯಾವ  ತೀರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾನು ಬದ್ದ ಎಂದು ಬಿಜೆಪಿ ಸದಸ್ಯೆ ಪ್ರಮೀಳಾ ಭರತ್ ಹೇಳಿದರು. (ಕೆ.ಎಸ್,ಎಸ್.ಎಚ್).

Leave a Reply

comments

Related Articles

error: