
ಮೈಸೂರು
ಅಂಗಾಂಗ ದಾನ ಮಾಡಿ 14 ಮಂದಿಗೆ ಮರುಜೀವ ನೀಡುವ ಮೂಲಕ ಸಾವಿನಲ್ಲೂ ಸಾರ್ಥಕತೆ
ಮೈಸೂರು,ಆ.20:- ಅಂಗಾಂಗ ದಾನ ಮಾಡುವ ಮೂಲಕ ಇಬ್ಬರು ದಾನಿಗಳು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದು, ಇಬ್ಬರು ದಾನಿಗಳಿಂದ 14 ಮಂದಿಗೆ ಮರುಜೀವ ದೊರಕಿದೆ.
ಹುಣಸೂರು ಮೂಲದ ಲಾರೆನ್ಸ್(40) ಹಾಗೂ ಕುಶಾಲನಗರ ಮೂಲದ ಶೋಭಾ(48) ಎಂಬವರಿಂದ ಅಂಗಾಂಗ ದಾನ ಮಾಡಲಾಗಿದೆ. ಆಗಸ್ಟ್ 16 ರಂದು ಲಾರೆನ್ಸ್ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದರು. ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ಕುಟುಂಬಸ್ಥರು ಅಂಗಾಂಗ ದಾನಕ್ಕೆ ನಿರ್ಧಾರ ಮಾಡಿದ್ದಾರೆ.
ಶೋಭಾ ಮೆದುಳಿನ ರಕ್ತಸ್ರಾವದಿಂದ ಬಳಲುತ್ತಿದ್ದರು. ಇಬ್ಬರು ದಾನಿಗಳಿಂದ 4 ಮೂತ್ರಪಿಂಡಗಳು, 2 ಲಿವರ್, 4 ಹೃದಯದ ಕವಾಟ ಹಾಗೂ 4 ಕಾರ್ನಿಯಾಗಳನ್ನು ದಾನ ಮಾಡಲಾಗಿದೆ. ಇಬ್ಬರೂ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. (ಕೆ.ಎಸ್,ಎಸ್.ಎಚ್)