ಮೈಸೂರು

ತವರಿಗೆ ಹೋದ ಪತ್ನಿ ಮನೆಗೆ ಮರಳದ ಕಾರಣ ಮನನೊಂದ ಪತಿ ಆತ್ಮಹತ್ಯೆ

  ಮೈಸೂರು,ಆ.20:-  ತವರು ಮನೆಗೆ ಹೋದ ಪತ್ನಿ ಮನೆಗೆ ಮರಳಿಲ್ಲ ಎಂಬ ಕಾರಣಕ್ಕೆ  ಮನನೊಂದ ಪತಿ ಮಹಾಶಯನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ ರಾತ್ರಿ ಮಹದೇವಪುರದಲ್ಲಿ ನಡೆದಿದೆ.

ಮೈಸೂರಿನ ಜೆ.ಪಿ ನಗರ ಸಮೀಪದ ಮಹದೇವಪುರ ನಿವಾಸಿ ಮಹೇಶ್ (40) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.  ಈತನ ಹೆಂಡತಿ ಕೆಲವು ದಿನಗಳ ಹಿಂದೆ ಮಕ್ಕಳೊಂದಿಗೆ ತವರು ಮನೆಗೆ ಹೋಗಿದ್ದು, ಮನೆಗೆ ಮರಳಲು ನಿರಾಕರಿಸಿದ್ದರಿಂದ ಮನನೊಂದ ಮಹೇಶ್ ಗುರುವಾರ ರಾತ್ರಿ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: