ಮೈಸೂರು

ಜೆಡಿಎಸ್ ಕಚೇರಿಯಲ್ಲಿ ಬಸವಣ್ಣನವರ ಜಯಂತಿ ಆಚರಣೆ

ಕಾಯಕಯೋಗಿ, ಜಗಜ್ಯೋತಿ ಅಣ್ಣ ಬಸವಣ್ಣನವರ ಜಯಂತಿಯನ್ನು ಜೆಡಿಎಸ್ ವತಿಯಿಂದ ಭಕ್ತಿಭಾವದಿಂದ ಆಚರಿಸಲಾಯಿತು.
ಮೈಸೂರಿನ ಶೇಷಾದ್ರಿ ಅಯ್ಯರ್ ರಸ್ತೆಯಲ್ಲಿರುವ ಜಾ.ದಳ ಕಚೇರಿಯಲ್ಲಿ ಪಕ್ಷದ ನಗರಾಧ್ಯಕ್ಷ ಕೆ.ಹರೀಶ್‍ಗೌಡ ಬಸವಣ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಬಸವಣ್ಣನಿಗೆ ನಮಿಸಿದರು. ಬಳಿಕ ಮಾತನಾಡಿದ ಅವರು, ಬಸವಣ್ಣ ಸಮಾಜದ ಕೊಳೆಯನ್ನು ತೊಳೆಯಲು ಹೊರಟ ಮಹಾನ್ ಸಂತ. ತಮ್ಮ ಶ್ರೇಷ್ಠಾತಿ ಶ್ರೇಷ್ಠ ವಚನಗಳ ಮೂಲಕ ಸಮಾಜದ ಸುಧಾರಣೆ ಮಾಡಿದರು. 12ನೇ ಶತಮಾನದಲ್ಲಿದ್ದ ಅಸಮಾನತೆ, ಮನುಷ್ಯ ಮನುಷ್ಯರನ್ನೇ ಮೇಲು-ಕೀಳಾಗಿ ಕಾಣುತ್ತಿರುವುದನ್ನು ಕಂಡು ನೊಂದು ಸಾಮಾಜಿಕ ಕ್ರಾಂತಿಯನ್ನೇ ಮಾಡಿದರು ಎಂದು ಹೇಳಿದರು.
ವಿಧಾನ ಪರಿಷತ್ ಉಪ ಸಭಾಪತಿ ಮರಿತಿಬ್ಬೇಗೌಡ, ನಗರ ಪಾಲಿಕೆ ಆಡಳಿತ ಪಕ್ಷದ ನಾಯಕ ಚೆಲುವೇಗೌಡ, ನಗರ ಪಾಲಿಕೆ ಸದಸ್ಯ ಆರ್.ಶೈಲೇಂದ್ರ, ಶಿವಣ್ಣ, ಮಹದೇವಪ್ಪ, ಚನ್ನಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಾ ಶಂಕರೇಗೌಡ, ಮುಖಂಡರಾದ ಡಿ.ಜಿ.ಸಂತೋಷ್, ಅನಂತನಾರಾಯಣ, ವಾಸು, ಲಕ್ಷ್ಮೀ, ರಾಧಾಕೃಷ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: