ಮೈಸೂರು

ವಾರ್ಡ್ ನಂಬರ್ 36ರ ಉಪಚುನಾವಣೆ : ಕಾಂಗ್ರೆಸ್ ನಿಂದ ರಜನಿ, ಜೆಡಿಎಸ್ ನಿಂದ ಲೀಲಾವತಿ ಕಣಕ್ಕೆ ; ಅಭ್ಯರ್ಥಿಯ ಹೆಸರು ನಾಳೆ ಅಂತಿಮಗೊಳಿಸುವ ಬಿಜೆಪಿ

ಮೈಸೂರು,ಆ.20:- ಮೈಸೂರು ಮಹಾನಗರ ಪಾಲಿಕೆಯ ವಾರ್ಡ್ ನಂಬರ್ 36ಕ್ಕೆ ಸೆ.3ರಂದು ಉಪಚುನಾವಣೆ ನಡೆಯಲಿದ್ದು ಕಾಂಗ್ರೆಸ್ ಪಕ್ಷವು ರಜನಿ ಅಣ್ಣಯ್ಯ ಅವರಿಗೆ ಟಿಕೇಟ್ ನೀಡಿದೆ.

ರಜನಿ ಅವರು ಕಳೆದ ಚುನಾವಣೆಯಲ್ಲಿ ಜೆಡಿಎಸ್ ನ ರುಕ್ಮಿಣಿ ಮಾದೇಗೌಡ ಅವರ ಎದುರು ಅಲ್ಪ ಮತಗಳ ಅಂತರದಲ್ಲಿ ಸೋಲನುಭವಿಸಿದ್ದರು. ಪಕ್ಷ ಮತ್ತೆ ಅವರನ್ನೇ ಕಣಕ್ಕಿಳಿಸಲು ತೀರ್ಮಾನಿಸಿದೆ. ನಿನ್ನೆ ಮೈಸೂರಿಗೆ ಬಂದಿದ್ದ ಮಾಜಿ ಸಿಎಂ ಸಿದ್ದರಾಮಯ್ಯನವರು ಪಕ್ಷದ ಅಭ್ಯರ್ಥಿಗೆ ಬಿ.ಫಾರಂ ವಿತರಿಸಿದ್ದಾರೆಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಅವರು ಆ.23ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎನ್ನಲಾಗಿದೆ.

ಜೆಡಿಎಸ್ ಪಕ್ಷವು ಲೀಲಾವತಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಬಿಜೆಪಿ ಅಭ್ಯರ್ಥಿಯ ಹೆಸರು ನಾಳೆ ಅಂತಿಮಗೊಳ್ಳುವ ಸಾಧ್ಯತೆಯಿದೆ. ಅಭ್ಯರ್ಥಿಯಾಗುವ ಆಕಾಂಕ್ಷಿಗಳಿಗೆ ಅರ್ಜಿ ಸಲ್ಲಿಸಲು ಆ.20ರವರೆಗೆ ಕಾಲಾವಕಾಶ ನೀಡಲಾಗಿದ್ದು, ಇದುವರೆಗೆ ಆರು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಉಪ ಚುನಾವಣೆ ಸಂಬಂಧ ಇಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರೊಂದಿಗೆ ಚರ್ಚಿಸಲಾಗುವುದು. ಅಭ್ಯರ್ಥಿಯ ಆಯ್ಕೆ ನಾಳೆ ನಡೆಯಲಿದೆ ಎಂದು ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ ತಿಳಿಸಿದ್ದಾರೆ.

ಸೆ.3ರಂದು ವಾರ್ಡ್ ನಂಬರ್ 36ಕ್ಕೆ ಉಪಚುನಾವಣೆ ನಡೆಯಲಿದ್ದು, ಉಪಚುನಾವಣೆಯ ಉಸ್ತುವಾರಿಯನ್ನು ಬಿಜೆಪಿಯು ಶಾಸಕ ಎಲ್ .ನಾಗೇಂದ್ರ ಅವರ ಹೆಗಲಿಗೇರಿಸಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: