ಮೈಸೂರು

ಪೌರಕಾರ್ಮಿಕ ಮಹಿಳೆಯರಿಗೆ ಬಾಗಿನ ನೀಡುವ ಮೂಲಕ ವರಮಹಾಲಕ್ಷ್ಮಿ ಹಬ್ಬ ಅರ್ಥಪೂರ್ಣ ಆಚರಣೆ

ಮೈಸೂರು,ಆ.20:- ಇಂದು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ವೀರಶೈವ ಲಿಂಗಾಯಿತ ಸಂಘಟನಾ ವೇದಿಕೆ ವತಿಯಿಂದ ವಾರ್ಡ್ ನಂಬರ್ 36 ಯರಗನಹಳ್ಳಿ ಹೊಸ ಬಡಾವಣೆಯಲ್ಲಿ ಪೌರಕಾರ್ಮಿಕ  ಮಹಿಳೆಯರಿಗೆ ಬಾಗಿನ ರೂಪದಲ್ಲಿ  ಸೀರೆ, ಅರಿಶಿನ, ಕುಂಕುಮ, ಬಳೆ, ಹೂವು ಎಲ್ಲವನ್ನೂ ಕೊಟ್ಟು ಅರ್ಥಪೂರ್ಣವಾಗಿ ಪೌರಕಾರ್ಮಿಕರೊಂದಿಗೆ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಯಿತು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ನಿಗಮದ ರಾಜ್ಯ ನಿರ್ದೇಶಕ ರಾದ ರೇಣುಕಾ ರಾಜ್ ಮಾತನಾಡಿ ವರಮಹಾಲಕ್ಷ್ಮಿ ದೇವಿಯು ಎಲ್ಲ ದಾರಿದ್ರ್ಯ ನೀಗುವ ದೇವರಾಗಿದ್ದು   ಬಡತನದ ದಾರಿದ್ರ್ಯ ನೀಗಲಿ,ಎಲ್ಲರ ಬಾಳು ಹಸನಾಗಲು ದೇವಿಯು  ಆಶೀರ್ವದಿಸಲಿ ಎಂದರು.  ಇಂತಹ ಧಾರ್ಮಿಕ ಹಬ್ಬಗಳನ್ನು ಸಮಾಜದ ಜೊತೆ ಬೆರೆತು ನಡೆಸಲು ಎಲ್ಲ ಸಂಘ ಸಂಸ್ಥೆಗಳಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ   ಚಂದ್ರು ,ದಿವ್ಯ ,ಶ್ರೀನಿವಾಸ್, ಜ್ಯೋತಿ ಇನ್ನಿತರರು ಹಾಜರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: