ಮೈಸೂರು

ಹುಣಸೂರು ಜಿಲ್ಲೆಗಾಗಿ ಮತ್ತೆ ಒಂದಾದ ಶಾಸಕ ಹೆಚ್.ಪಿ.ಮಂಜುನಾಥ್-ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್

ಮೈಸೂರು,ಆ.20:- ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಬೆನ್ನಲ್ಲೇ ಹುಣಸೂರನ್ನು ಪ್ರತ್ಯೇಕ ಜಿಲ್ಲೆ ಮಾಡುವಂತೆ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್  ಒತ್ತಡ ಹೇರಿದ್ದರು. ಆದಾದ ನಂತರ ಕೆಲ ದಿನಗಳ ಕಾಲ  ಈ ವಿಚಾರ  ಅಲ್ಲಿಗೇ ನಿಂತಿತ್ತು.  ಇದೀಗ ಮತ್ತೆ ಹುಣಸೂರು ಪ್ರತ್ಯೇಕ ಜಿಲ್ಲೆ ಕೂಗು ಮುನ್ನಲೆಗೆ ಬಂದಿದೆ.

ಹುಣಸೂರು ಪ್ರತ್ಯೇಕ ಜಿಲ್ಲೆಗಾಗಿ ಬಿಜೆಪಿ ಎಂಎಲ್ ಸಿ ಹೆಚ್.ವಿಶ್ವನಾಥ್ ಹಾಗೂ ಹುಣಸೂರು ಕಾಂಗ್ರೆಸ್ ಶಾಸಕ ಹೆಚ್.ಪಿ ಮಂಜುನಾಥ್ ಒಂದಾಗಿದ್ದಾರೆ. ಹುಣಸೂರು ಪ್ರತ್ಯೇಕ ಜಿಲ್ಲೆ ಮಾಡುವಂತೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಅವರಿಗೆ ಮನವಿ ಸಲ್ಲಿಸಲು ಇಬ್ಬರು ನಾಯಕರು ನಿರ್ಧರಿಸಿದ್ದಾರೆ.

ಮೈಸೂರು ಜಿಲ್ಲೆಯ ಒತ್ತಡ ಕಡಿಮೆ ಮಾಡಲು ಹುಣಸೂರು ಪ್ರತ್ಯೇಕ ಜಿಲ್ಲೆ ಮಾಡಬೇಕು ಎಂದು ಜಂಟಿಯಾಗಿ ಇಬ್ಬರು ನಾಯಕರು ಒತ್ತಾಯ ಮಾಡಿದ್ದು ಇದೇ ವಿಚಾರವನ್ನು ಮುಂದಿನ ಅಧಿವೇಶನದಲ್ಲೂ ಪ್ರಸ್ತಾಪಿಸುವುದಾಗಿ ತಿಳಿಸಿದರು.

ಇಂದು ಹುಣಸೂರಿನಲ್ಲಿ ಮಾಜಿಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು ಅವರ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಅವರ ಪ್ರತಿಮೆಗೆ ಮಾಲಾರ್ಪಣೆಗೈದು ಬಳಿಕ ಮಾತನಾಡಿದ ಶಾಸಕ ಹೆಚ್.ಪಿ. ಮಂಜುನಾಥ್ ಹುಣಸೂರು ಜನರ ಅಸ್ಮಿತೆ ವಿಚಾರ ಕ್ಕೋಸ್ಕರ, ಮೈಸೂರು ಜಿಲ್ಲೆಯಯಲ್ಲಿ ಜಿಲ್ಲಾಡಳಿತದ ಮೇಲಿರುವ ಒತ್ತಡದ ವಿರೋಧಕ್ಕೋಸ್ಕರ ನಾವು ಜಿಲ್ಲಾ ಮಂತ್ರಿಗಳ ಮುಂದೆ ಮನವಿ ನೀಡಲಿದ್ದೇವೆ.  ಸೆ.13ರಿಂದ ಸೆಷನ್ಸ್ ನಡೆಯಲಿಕ್ಕಿದೆ. ಅಲ್ಲಿ ನಮ್ಮ ಪ್ರಸ್ತಾಪ ಇಡುತ್ತೇವೆ. ಜಿಲ್ಲಾಡಳಿತದ ಒತ್ತಡವನ್ನು ತಗ್ಗಿಸಲು ನಮ್ಮ ಮೊದಲ ಆದ್ಯತೆ. ಹುಣಸೂರು ಜಿಲ್ಲೆ ಅಂದ ತಕ್ಷಣ ನಾವೇನು ಪಾಕಿಸ್ತಾನಕ್ಕೆ ಒಡೋಗಲ್ಲ, ಮೈಸೂರಿನವರೇ ಆಗಿರುತ್ತೇವೆ. ಮೈಸೂರು ನಮ್ಮ ಅಸ್ಮಿತೆ ಎನ್ನುವುದು ನಮಗೆ ಅರ್ಥವಾಗಿದೆ.   ಆಡಳಿತ ವರ್ಗೀಕರಣ ಆಗಬೇಕು ಎಂದರು. ನಾನು ಮತ್ತು ವಿಶ್ವನಾಥ್ ಅವರು ಇಬ್ಬರೂ ಜೊತೆಗೂಡಿ ಮನವಿ ನೀಡಲಿದ್ದೇವೆ ಎಂದು ತಿಳಿಸಿದರು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: