ಕರ್ನಾಟಕದೇಶಪ್ರಮುಖ ಸುದ್ದಿ

ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಬದಲಾವಣೆ : ಕೆ.ಸಿ. ವೇಣುಗೋಪಾಲ್‍ಗೆ ಹೊಣೆ

ನವದೆಹಲಿ: ಕರ್ನಾಟಕ ಮತ್ತು ಗೋವಾ ರಾಜ್ಯ ಕಾಂಗ್ರೆಸ್ ಉಸ್ತುವಾರಿಯನ್ನು ದಿಗ್ವಿಜಯ್ ಸಿಂಗ್ ಅವರಿಂದ ವಾಪಸ್ ಪಡೆದು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಆದೇಶ ಹೊರಡಿಸಿದ್ದಾರೆ.

ಕರ್ನಾಟಕಕ್ಕೆ ಕೆ.ಸಿ. ವೇಣುಗೋಪಾಲ್ ಮತ್ತು ಗೋವಾ ರಾಜ್ಯಕ್ಕೆ ಎ.ಚೆಲ್ಲಾ ಕುಮಾರ್ ಅವರನ್ನು ಹೊಸ ಉಸ್ತುವಾಗಿಯಾಗಿ ನೇಮಕ ಮಾಡಲಾಗಿದೆ. ಕರ್ನಾಟದಲ್ಲಿ ಮುಂದಿನ ವರ್ಷ ಚುನಾವಣೆ ಇರುವ ಕಾರಣ ದಿಗ್ವಿಜಯ್ ಸಿಂಗ್ ಅವರನ್ನು ಬದಲಾಯಿಸಲಾಗಿದೆ ಎನ್ನಲಾಗಿದೆ.

ಗೋವಾ ಎಡವಟ್ಟು !

ಗೋವಾ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಫಲಿತಾಂಶ ಬಂದಾಗ ಅತಿದೊಡ್ಡ ಪಕ್ಷವಾಗಿದ್ದ ಕಾಂಗ್ರೆಸ್ ಸರ್ಕಾರ ರಚಿಸಲು ವಿಫಲವಾದ್ದರಿಂದ ಉಸ್ತುವಾರಿ ಹೊಣೆ ಹೊತ್ತಿದ್ದ ದಿಗ್ವಿಜಯ್ ಸಿಂಗ್ ಅವರ ತಲೆದಂಡವಾಗಿದೆ.

ಗೋವಾದಲ್ಲಿ ಬಿಜೆಪಿ ಸರ್ಕಾರ ರಚಿಸಲು ದಿಗ್ವಿಜಯ್ ಸಿಂಗ್ ಅವರೇ ನೇರ ಹೊಣೆ ಎಂದು ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಲುಯಿಝಿನೋ ಫಲರಿಯೊ ಅವರು ನೇರ ವಾಗ್ದಾಳಿ ನಡೆಸಿದ್ದರು. “ಸರ್ಕಾರ ರಚಿಸುವ ಎಲ್ಲ ಅವಕಾಶ ಕಾಂಗ್ರೆಸ್‍ಗಿತ್ತು. ಬಹುಮತ ಸಾಬೀತುಪಡಿಸುವ ಸಂಖ್ಯೆಯೂ ನಮ್ಮ ಬಳಿ ಇತ್ತು.  ನಾನು ರಾಜ್ಯಪಾಲರಿಗೆ ಮನವಿ ಮಾಡುವ ಪತ್ರವನ್ನೂ ಕೂಡ ಸಿದ್ಧವಾಗಿಟ್ಟುಕೊಂಡಿದ್ದೆ. ಆದರೆ ದಿಗ್ವಿಜಯ್ ಸಿಂಗ್ ಅವರು ರಾಜ್ಯಪಾಲರ ಆಮಂತ್ರಣ ಬರುವರೆಗೂ ಕಾಯಬೇಕೆಂದು ನಮ್ಮನ್ನು ತಡೆದರು. ಪರಿಣಾಮ ಬಿಜೆಪಿ ಶಾಸಕರನ್ನು ಸೆಳೆದು ಸರ್ಕಾರ ರಚಿಸಿತು” ಎಂದು ವಾಗ್ದಾಳಿ ನಡೆಸಿದ್ದರು.

ನಂತರ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಗೋವಾ ಜನತೆಗೆ ಅನ್ಯಾಯ ಮಾಡಿದ್ದಾರೆ ಎಂದು ದಿಗ್ವಿಜಯ್ ಸಿಂಗ್ ಟೀಕಿಸಿದ್ದರು. ಇದಕ್ಕುತ್ತರವೆಂಬಂತೆ ಪರಿಕ್ಕರ್ ಹೇಳಿಕೆ ನೀಡಿ “ದಿಗ್ವಿಜಯ್ ಸಿಂಗ್ ಅವರಿಂಗೆ ತುಂಬಾ ಧನ್ಯವಾದಗಳು. ಅವರ ವಿಳಂಬದಿಂದಲೇ ನಾನು ಸರ್ಕಾರ ರಚಿಸುವಂತಾಯ್ತು” ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಪಕ್ಷಕ್ಕೆ ಅವಕಾಶ ತಪ್ಪಿಹೋಗಿ ಗೋವಾದಲ್ಲಿ ಮುಖಭಂಗ ಅನುಭವಿಸಬೇಕಾದ ಕಾರಣ ದಿಗ್ವಿಜಯ್ ಸಿಂಗ್ ಅವರನ್ನು ಉಸ್ತುವಾರಿ ಸ್ಥಾನದಿಂದ ಬದಲಾಯಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಆದೇಶ ಹೊರಡಿಸಿದ್ದಾರೆ.

ಕರ್ನಾಟಕದಲ್ಲೂ ದಿಗ್ವಿಜಯ್ ಸಿಂಗ್ ಅವರನ್ನು ಬದಲಾಯಿಸಬೇಕೆಂದು ಅವರ ವಿರುದ್ಧ ಹಲವಾರು ದೂರುಗಳು ಕೇಳಿಬಂದಿದ್ದವು.

(ಎನ್.ಬಿ.ಎನ್)

Leave a Reply

comments

Related Articles

error: