ಮೈಸೂರು

ಸರ ಕಸಿದು ಪರಾರಿ

ಮೈಸೂರಿನಲ್ಲಿ ಸರಗಳ್ಳರು ಮತ್ತೆ  ತಮ್ಮ ಕರಾಮತ್ತು ತೋರಿಸುತ್ತಿದ್ದಾರೆ. ದ್ವಿಚಕ್ರವಾಹನದಲ್ಲಿ ಸಾಗುತ್ತಿದ್ದ ಮಹಿಳೆಯೋರ್ವರ ಚಿನ್ನದ ಸರವನ್ನು ಇನ್ನೊಂದು ದ್ವಿಚಕ್ರವಾಹನದಲ್ಲಿ ಬಂದ ಯಾರೋ ದುಷ್ಕರ್ಮಿಗಳು ಕಸಿದು ಪರಾರಿಯಾಗಿದ್ದಾರೆ.

ಆಲನಹಳ್ಳಿ ನಿವಾಸಿ ಕೃಷ್ಣ ಮತ್ತವರ ಪತ್ನಿ ರೂಪಶ್ರೀ ಮೈಸೂರಿನ ತಿ.ನರಸೀಪುರ ರಸ್ತೆಯಲ್ಲಿ
ಬೈಕಿನಲ್ಲಿ ಸಾಗುತ್ತಿದ್ದ ವೇಳೆ ಅದೇ ಮಾರ್ಗವಾಗಿ ಬಂದ ದುಷ್ಕರ್ಮಿಗಳು ದ್ವಿಚಕ್ರವಾಹನದ ಹಿಂಬದಿ ಕುಳಿತಿದ್ದ ರೂಪಶ್ರೀಯವರ ಕತ್ತಿನಲ್ಲಿದ್ದ 60 ಗ್ರಾಂ ತೂಕದ ಚಿನ್ನದ  ಸರವನ್ನು ಕಸಿದು ಪರಾರಿಯಾಗಿದ್ದಾರೆ.

ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

comments

Related Articles

error: