ದೇಶಪ್ರಮುಖ ಸುದ್ದಿ

24 ಗಂಟೆಗಳಲ್ಲಿ ದೇಶದಲ್ಲಿ 34 ಸಾವಿರ ಹೊಸ ಕೊರೋನಾ ಪ್ರಕರಣ  ಪತ್ತೆ

ದೇಶ(ನವದೆಹಲಿ)ಆ.21:- ಸಮಾಧಾನಕರ ಸಂಗತಿಯೆಂದರೆ ಭಾರತದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳಲ್ಲಿ ಇಳಿಕೆ ಕಂಡು ಬರುತ್ತಿದೆ.

ಇತ್ತೀಚಿನ ಡೇಟಾವನ್ನು ಆರೋಗ್ಯ ಸಚಿವಾಲಯ ಶನಿವಾರ ಬೆಳಿಗ್ಗೆ ಬಿಡುಗಡೆ ಮಾಡಿದೆ. ಸಚಿವಾಲಯದ ಪ್ರಕಾರ, ಕಳೆದ 24 ಗಂಟೆಗಳಲ್ಲಿ 34 ಸಾವಿರದ 457 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಅದೇ ವೇಳೆ 375 ಕೊರೋನಾ ಸೋಂಕಿತ ರೋಗಿಗಳು ಸಾವನ್ನಪ್ಪಿದ್ದಾರೆ.

ಈ ಅವಧಿಯಲ್ಲಿ ಸಕ್ರಿಯ ರೋಗಿಗಳ ಸಂಖ್ಯೆಯೂ ಕಡಿಮೆಯಾಗಿದೆ. ಪ್ರಸ್ತುತ 3 ಲಕ್ಷ 61 ಸಾವಿರದ 340 ಸಕ್ರಿಯ ರೋಗಿಗಳಿದ್ದಾರೆ. ಈ ಅಂಕಿ ಅಂಶವು 151 ದಿನಗಳಲ್ಲಿಯೇ ಅತ್ಯಂತ ಕಡಿಮೆ ಆಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: