ಮೈಸೂರು

ಕೆ.ಆರ್ ಕ್ಷೇತ್ರವನ್ನು  ಅಭಿವೃದ್ಧಿ ಪಡಿಸುವತ್ತ  ರೂಪಿಸಿದ್ದ ಯೋಜನೆಗಳ ಬಗ್ಗೆ ಸಭೆ ನಡೆಸಿದ ಶಾಸಕ ರಾಮದಾಸ್

ಮೈಸೂರು,ಆ.22:- ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕೆ.ಆರ್ ಕ್ಷೇತ್ರವನ್ನು  ಅಭಿವೃದ್ಧಿ ಪಡಿಸುವತ್ತ  ರೂಪಿಸಿದ್ದ ಯೋಜನೆಗಳ ಬಗ್ಗೆ   ನಗರಪಾಲಿಕಾ ಆವರಣದಲ್ಲಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಶಾಸಕ ಎಸ್.ಎ.ರಾಮದಾಸ್ ಸಭೆ ನಡೆಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಈಗಾಗಲೇ ಕೆ.ಆರ್ ಕ್ಷೇತ್ರವನ್ನು ಸೇಫ್ಟಿ ರೋಡ್ ಕ್ಷೇತ್ರವನ್ನಾಗಿ ಮಾಡಬೇಕು ಎಂಬುದರ ಬಗ್ಗೆ ಹಲವಾರು ಸಭೆಗಳು ನಡೆದಿವೆ. 422 ಕಿ.ಮಿ ರಸ್ತೆಗಳು ನಮ್ಮ ಕ್ಷೇತ್ರದ ವ್ಯಾಪ್ತಿಗೆ ಬರಲಿದೆ. ಈ ರಸ್ತೆಗಳಲ್ಲಿ ಸುಮಾರು 200 ಕಿ.ಮಿ ನಷ್ಟು ರಸ್ತೆ ಸುಸ್ಥಿತಿಯಲ್ಲಿಲ್ಲ. ಈ 200 ಕಿ.ಮಿ ರಸ್ತೆಯನ್ನು ಸುಸ್ಥಿತಿಗೆ ತರಲು ನಾವೆಲ್ಲ ಶ್ರಮಿಸಬೇಕಿದೆ ಎಂದರು.

ನಗರೋತ್ಥಾನದ ಅಡಿಯಲ್ಲಿ ನಮ್ಮಲ್ಲಿರುವ 114 ಪಾರ್ಕ್ ಹಾಗೂ 18 ಸ್ಮಶಾನಗಳಿವೆ ಅದನ್ನು ಕೂಡಾ ಮಾಡೆಲ್ ಆಗಿ ನಿರ್ಮಾಣಮಾಡಬೇಕಿದೆ. ಸ್ವಂತ ಸೂರು ಇಲ್ಲದವರಿಗೆ ಸ್ವಂತ ಸೂರನ್ನು ನೀಡುವತ್ತ ಈಗಾಗಲೇ ನಾವೆಲ್ಲ ಹೆಜ್ಜೆ ಹಾಕಿದ್ದೇವೆ. ಆಗಸ್ಟ್ 15 2022 ರ ಒಳಗೆ ಕೆ.ಆರ್ ಕ್ಷೇತ್ರವನ್ನು ಸೇಫ್ಟಿ ರೋಡ್ ಕ್ಷೇತ್ರವನ್ನಾಗಿ ಮಾಡಬೇಕಿದೆ ಎಂದರು.

ಸಭೆಯಲ್ಲಿ  ಆಜಾದಿ ಕಾ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕೆ.ಆರ್ ಕ್ಷೇತ್ರವನ್ನು  ಅಭಿವೃದ್ಧಿ ಪಡಿಸುವತ್ತ  200 ಕಿ.ಮಿ ರಸ್ತೆಯನ್ನು ಸುಸ್ಥಿತಿಗೆ ತರುವ ಮೂಲಕ ಸೇಫ್ಟಿ ರೋಡ್ ಕ್ಷೇತ್ರ ವನ್ನಾಗಿ ಪರಿವರ್ತನೆ ಮಾಡುವುದು. ಕ್ಷೇತ್ರದಲ್ಲಿ ಬರುವ ಎಲ್ಲಾ ಸ್ಮಶಾನಗಳ ಅಭಿವೃದ್ಧಿ, ಪ್ರತಿಯೊಂದು ಪಾರ್ಕ್ ಗಳನ್ನು ಕೂಡಾ ಒಂದು ಥೀಮ್ ನೊಂದಿಗೆ ಅಭಿವೃದ್ಧಿ ಪಡಿಸುವುದು.ಕ್ಷೇತ್ರದ ನಿವಾಸಿಗಳಿಗೆ ಸ್ವಂತ ಸೂರು ನೀಡುವುದಕ್ಕಾಗಿ ಆಶ್ರಯ ಯೋಜನೆಯಡಿ ಸ್ವಂತ ಮನೆ ನೀಡುವುದು ಈ ಕುರಿತು ಚರ್ಚಿಸಲಾಯಿತು.

ಸಭೆಯಲ್ಲಿ ನಗರಪಾಲಿಕಾ ಆಯುಕ್ತರಾದ ಲಕ್ಷ್ಮೀಕಾಂತ್ ರೆಡ್ಡಿ ಜಿ,  ಹೆಚ್ಚುವರಿ ಆಯುಕ್ತರು, ಉಪ ಆಯುಕ್ತರು ( ಅಭಿವೃದ್ಧಿ) , ಕಾರ್ಯಪಾಲಕ ಅಭಿಯಂತರರು, ಕೌನ್ಸಿಲ್ ಕಾರ್ಯದರ್ಶಿಗಳು, ನಗರಪಾಲಿಕಾ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: