ಮೈಸೂರು

 ರಕ್ಷಾ ಬಂಧನ ಭ್ರಾತೃತ್ವದ ಸಂಕೇತ :   ಲಕ್ಷ್ಮಿದೇವಿ ಹೇಳಿಕೆ

ಮೈಸೂರು,ಆ.22:- ರಕ್ಷಾ ಬಂಧನ ಭ್ರಾತೃತ್ವ, ಸ್ನೇಹದ ಸಂಕೇತ. ಇಂಥ ಆಚರಣೆಗಳಿಂದ ಮಾನವೀಯ ಸಂಬಂಧಗಳು ಗಟ್ಟಿಗೊಳ್ಳುತ್ತವೆ’ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯೆ ಲಕ್ಷ್ಮಿದೇವಿ  ಹೇಳಿದರು.

ಚಾಮುಂಡಿಪುರಂ ವೃತ್ತದಲ್ಲಿ  ಕೃಷ್ಣರಾಜ ಯುವ ಬಳಗದ ವತಿಯಿಂದ ಸಹೋದರರಿಗೆ  ರಾಖಿ ಕಟ್ಟಿ ಶುಭ ಹಾರೈಸಿ ಮಾತನಾಡಿದರು. ನಮಗೆ ಪರಮಾತ್ಮನ ದಯೆ ಇದ್ದರೆ ಏನೆಲ್ಲ ಸಾಧ್ಯ ಎಂಬುದು ಸೇರಿದಂತೆ ಮಾನವೀಯ ಧರ್ಮದ ಕುರಿತು ತಿಳಿಸಲಾಗುತ್ತಿದೆ. ಮನುಷ್ಯರ ಮನಸ್ಸು ಶುದ್ದವಾಗಿದ್ದರೆ ದೇಹವೂ ಶುದ್ದವಾಗಿ, ಸಮರ್ಥವಾಗಿ ಕೆಲಸ ಮಾಡಲು ಸಾಧ್ಯ ಎಂದರು.

ನಗರ ಪಾಲಿಕಾ ಮಾಜಿ ಸದಸ್ಯರಾದ ಎಂ ಡಿ ಪಾರ್ಥಸಾರಥಿ ಮಾತನಾಡಿ ‘ಪ್ರತಿಯೊಬ್ಬರಿಗೂ ಆತ್ಮಸ್ಥೈರ್ಯ ಮುಖ್ಯ. ಅದಿದ್ದರೆ ಮಾತ್ರ ಜೀವನ ಪರಿಪೂರ್ಣವಾಗುತ್ತದೆ. ಎಲ್ಲರೂ ಪ್ರೀತಿ, ಸ್ನೇಹ, ಮಾನವೀಯತೆಯ ಗುಣ ಮೈಗೂಡಿಸಿಕೊಂಡು ಮುನ್ನಡೆದರೆ ಜೀವನದಲ್ಲಿ ಸಾರ್ಥಕತೆ ಕಾಣಲು ಸಾಧ್ಯ ಎಂದು ಹೇಳಿದರು.

ಸಾರ್ವಜನಿಕರಿಗೆ  ರಾಖಿ ಕಟ್ಟಿ ಶುಭ ಕೋರಲಾಯಿತು. ಅನೇಕ ಪ್ರಮುಖರಿಗೆ ಕೊರಿಯರ್ ಮೂಲಕ ರಾಖಿ ಕಳುಹಿಸಿ   ಶುಭ ಹಾರೈಸಲಾಯಿತು.

ಇದೇ ಸಂದರ್ಭದಲ್ಲಿ  ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್  ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ ,ಕೃಷ್ಣ ರಾಜ ಯುವಬಳಗದ ಅಧ್ಯಕ್ಷ ನವೀನ್ ಕೆಂಪಿ ,ಅಪೂರ್ವ ಸುರೇಶ್   ಇನ್ನಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: