ಕರ್ನಾಟಕನಮ್ಮೂರುಪ್ರಮುಖ ಸುದ್ದಿಮೈಸೂರು

ಬಾಯಲ್ಲಿ ನೀರೂರಿಸುತ್ತಿದೆ ಬಂಬೂ ಬಿರಿಯಾನಿ

ಬಿದಿರಕ್ಕಿಯ ಘಮ, ಬಾಯಲ್ಲಿ ನೀರೂರಿಸುವ ತರಹೇವಾರಿ ತಿನಿಸುಗಳು ಜನತೆಯನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿತ್ತು.

ಇವೆಲ್ಲ ಕಂಡು ಬಂದಿದ್ದು ಮೈಸೂರಿನ ಸ್ಕೌಟ್ಸ್ & ಗೈಡ್ಸ್ ಭವನದಲ್ಲಿ. ಇಲ್ಲಿ  ದಸರಾ ಉತ್ಸವ ಪ್ರಯುಕ್ತ  ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮತ್ತು ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ವತಿಯಿಂದ ಆಹಾರ ಮೇಳವನ್ನು ಆಯೋಜಿಸಲಾಗಿದ್ದು, ಬುಡಕಟ್ಟು ಹಾಡಿ ಮನೆ ಊಟವನ್ನು ಮೈಸೂರಿಗಾಗಮಿಸಿದ ನೂರಾರು ಪ್ರವಾಸಿಗರು ಬಾಯಿಚಪ್ಪರಿಸಿ ಸವಿಯುತ್ತಿರುವುದು ಕಂಡು ಬಂತು.

ಇಲ್ಲಿ ವಿಶೇಷವಾಗಿ ಬಿದಿರಿನೊಳಗೆ ಬಿದಿರಕ್ಕಿ ಮತ್ತು ಮಸಾಲೆಯನ್ನು ಸೇರಿಸಿ ಬೆಂಕಿಯ ಕೆಂಡದಲ್ಲಿರಿಸಿ ತಯಾರಿಸುವ ರುಚಿಕರವಾದ ಬಂಬೂ ಬಿರಿಯಾನಿಯಾಗಿದ್ದು ಇದನ್ನು ಸವಿಯಲೋಸುಗವೇ ನೂರಾರು ಮಂದಿ ಭೇಟಿ ನೀಡಿದ್ದರು.

ಬುಡಕಟ್ಟು ಜನಾಂಗದವರ ವಿಶೇಷ ತಿನಿಸುಗಳು ಆಹಾರ ಮೇಳದಲ್ಲಿ ಜನರನ್ನಾಕರ್ಷಿಸುವಲ್ಲಿ ಯಶಸ್ವಿಯಾಗಿದೆ.

Leave a Reply

comments

Related Articles

error: