ಮೈಸೂರು

ಉಗ್ರರ ಬೇಟೆ ವೇಳೆ ಮೈಸೂರು ಮೂಲದ ಯೋಧನಿಗೆ ಗಂಭೀರ ಗಾಯ

ಜಮ್ಮು ಕಾಶ್ಮೀರದಲ್ಲಿ ಉಗ್ರರ ಬೇಟೆ ವೇಳೆ ಮೈಸೂರಿನ ಯೋಧರೋರ್ವರು  ಗಂಭೀರ ಗಾಯಗೊಂಡಿದ್ದಾರೆ.
ಜಮ್ಮು ಕಾಶ್ಮೀರದ ಕುಪ್ವಾರದಲ್ಲಿ ಕಳೆದ ಗುರುವಾರ ಉಗ್ರರ ವಿರುದ್ಧದ ಕಾರ್ಯಾಚರಣೆ  ವೇಳೆ ಮೈಸೂರು ತಾಲೂಕಿನ ಇಲವಾಲ ಹೋಬಳಿಯ ಭದ್ರೇಗೌಡನ ಕೊಪ್ಪಲಿನ ನಿವಾಸಿ ಲೇಟ್ ಬಸವರಾಜೇಗೌಡರ ಪುತ್ರ ಬಿ. ರಮೇಶ್ ಗಾಯಗೊಂಡವರಾಗಿದ್ದಾರೆ.
ಸದ್ಯ ಶ್ರೀನಗರದ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,ರಮೇಶ್ ಗಾಯಗೊಂಡಿರುವ ಸುದ್ದಿ ತಿಳಿದು ಕುಟುಂಬ ಸದಸ್ಯರು ಕಂಗಾಲಾಗಿದ್ದಾರೆ.
ಈ ಬಗ್ಗೆ ಮೈಸೂರು ಜಿಲ್ಲಾಡಳಿತ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಕುಟುಂಬ  ಸದಸ್ಯರುಅಳಲು ತೋಡಿಕೊಂಡಿದ್ದು, ರಮೇಶ್ ರನ್ನು ಆದಷ್ಟು ಬೇಗ ನೋಡಬೇಕೆಂದು ಹಂಬಲ ವ್ಯಕ್ತಪಡಿಸುತ್ತಿದ್ದಾರೆ.ಕುಟುಂಬದ ಪೈಕಿ ಯಾರದರೊಬ್ಬರು ಶ್ರೀನಗರಕ್ಕೆ ಹೋಗಿಬರಲು ಜಿಲ್ಲಾಡಳಿತ ವ್ಯವಸ್ಥೆ ಮಾಡುವಂತೆ ಯೋಧ ರಮೇಶ್ ರ ತಾಯಿ ಪುಟ್ಟಮ್ಮ ಹಾಗೂ ಪತ್ನಿ ರೇಖಾ ಆಗ್ರಹಿಸಿದ್ದಾರೆ. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: