ಕರ್ನಾಟಕಪ್ರಮುಖ ಸುದ್ದಿ

`2023ರ ಚುನಾವಣೆ ನನ್ನ ಜೀವನದ ಕೊನೆಯ ಹೋರಾಟ’: ಎಚ್.ಡಿ.ಕುಮಾರಸ್ವಾಮಿ

ಹಾವೇರಿ,ಆ.24-`2023ರ ಚುನಾವಣೆಯೇ ನನ್ನ ಜೀವನದ ಕೊನೆಯ ಹೋರಾಟ’ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಹಾವೇರಿ ಜಿಲ್ಲೆ ಹಿರೇಕೆರೂರಿಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯಾಗುತ್ತಿದ್ದಂತೆಯೇ ಯಾವ ನೀರಾವರಿ ಅಥವಾ ರಸ್ತೆ ಯೋಜನೆಗೆ ಅನುಮೋದನೆ ನೀಡಲಿಲ್ಲ. ಬದಲಿಗೆ ರೈತರ 25 ಸಾವಿರ ಕೋಟಿ ಸಾಲಮನ್ನಾ ಮಾಡಿದೆ. ಇದರಿಂದ ನನಗೇನು ಲಾಭವಿಲ್ಲ. ಅದೇ ನೀರಾವರಿ, ರಸ್ತೆ ನಿರ್ಮಾಣ ಯೋಜನೆಗೆ ಮುಂದಾಗಿದ್ದರೆ ಪ್ರತಿಶತ 10ರಷ್ಟು ಕಮೀಷನ್ ಬರುತ್ತಿತ್ತು

ಇದೇ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ರಾಜ್ಯದಲ್ಲಿ ಬಿಜೆಪಿಯಂತಹ ಕೆಟ್ಟ ಸರ್ಕಾರ ಬರಲು ಕಾಂಗ್ರೆಸ್ ನಾಯಕರೇ ಕಾರಣ ಎಂದು ಆರೋಪಿಸಿದರು.

ಕೃಷಿ ಸಚಿವ ಬಿ.ಸಿ.ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದ ಎಚ್ಡಿಕೆ ನನಗೆ ಸಿಎಂ ಆಗುವ ಮೊದಲೇ ಹಿರೇಕೆರೂರು ಗೊತ್ತಿತ್ತು. ಅಂದು ಬಣವೆಗೆ ಬೆಂಕಿ ಬಿದ್ದಾಗ ನಾನೇ ಖುದ್ದಾಗಿ ಬಂದು ಬಿ. ಸಿ. ಪಾಟೀಲ್ ಪರವಾಗಿ ಎರಡು ಲಕ್ಷ ರೂಪಾಯಿ ಪರಿಹಾರ ನೀಡಿದ್ದೆ ಎಂದು ನೆನಪಿಸಿಕೊಂಡರು.

ಬಿ.ಸಿ.ಪಾಟೀಲ್ ಅವರ ದುರಹಂಕಾರ ಹಾಗೂ ದಬ್ಬಾಳಿಕೆಯ ಪ್ರವೃತ್ತಿ ಸರಿಯಲ್ಲ. ಅಧಿಕಾರ ಯಾರಿಗೂ ಶಾಶ್ವತವಲ್ಲ. ನನಗೂ ಶಾಶ್ವತವಲ್ಲ, ಅವರಿಗೆ ಶಾಶ್ವತವಲ್ಲ. ಎಲ್ಲಿಯವರೆಗೆ ಮತದಾರರ ಪ್ರೀತಿ, ವಿಶ್ವಾಸ ಇರುತ್ತದೋ ಅಲ್ಲಿಯವರೆಗೆ ಅಧಿಕಾರವಿರುತ್ತೆ. ದಬ್ಬಾಳಿಕೆ, ದುರಹಂಕಾರ ಹಾಗೂ ಅಕ್ರಮ ಹಣದಿಂದ ಅಧಿಕಾರ ಸಂಪಾದನೆ ಮಾಡಲು ಆಗುವುದಿಲ್ಲ ಎಂದು ಕುಮಾರಸ್ವಾಮಿ ಚಾಟಿ ಬೀಸಿದರು.

Leave a Reply

comments

Related Articles

error: