ಮೈಸೂರು

ಮೇಯರ್  ಚುನಾವಣೆಗೆ ಕ್ಷಣಗಣನೆ : ಜೆಡಿಎಸ್ ನಿಂದ   ಅಶ್ವಿನಿ ಅನಂತು ಕಣಕ್ಕೆ

ಮೈಸೂರು,ಆ.25:- ಮೈಸೂರು ಮಹಾನಗರ ಪಾಲಿಕೆಯ ಮೇಯರ್  ಚುನಾವಣೆಗೆ ಕ್ಷಣಗಣನೆ ನಡೆದಿದ್ದು, ಜೆಡಿಎಸ್ ನಿಂದ   ಅಶ್ವಿನಿ ಅನಂತು ಕಣಕ್ಕಿಳಿಯಲಿದ್ದಾರೆ. ಸ್ಪರ್ಧೆಗಿಳಿಯುವಂತೆ ಜೆಡಿಎಸ್ ನಾಯಕರು ಒಮ್ಮತದ ನಿರ್ಧಾರ ಕೈಗೊಂಡಿದ್ದು, ಈ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸಲು ಪಾಲಿಕೆಗೆ   ಅಶ್ವಿನಿ ಅನಂತು ಆಗಮಿಸಿದರು. ವಾರ್ಡ್ ನಂ 37ರ ಪಾಲಿಕೆ ಸದಸ್ಯೆಯಾಗಿರುವ ಅಶ್ವಿನಿ ಅನಂತು, ಬಿಜೆಪಿಯಿಂದ ಸುನಂದಾ ಪಾಲನೇತ್ರ, ಕಾಂಗ್ರೆಸ್ ನಿಂದ ಶಾಂತಕುಮಾರಿ ಕಣದಲ್ಲಿದ್ದಾರೆ. ಬಿಜೆಪಿಯ ವಾರ್ಡ್ ನಂ 59ರ ಸದಸ್ಯೆ ಸುನಂದಾ ಪಾಲನೇತ್ರ, ವಾರ್ಡ್ ನಂ 32ರ  ಕಾಂಗ್ರೆಸ್ ನ ಸದಸ್ಯೆ ಶಾಂತಕುಮಾರಿ ಯಿಂದ ಕೆಲವೇ ಕ್ಷಣಗಳಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: